ಮೈಸೂರು,ಏಪ್ರಿಲ್, 13,2026 (www.justkannada.in) ಮೈಸೂರು ನಗರದ ದಟ್ಟಗಳ್ಳಿ 12ನೇ ಮೇನ್ ರಸ್ತೆಯಲ್ಲಿ, ಶಕ್ತಿ ಗಣಪತಿ ದೇವಸ್ಥಾನದ ಹತ್ತಿರ ಯುಜಿಡಿ (ಚೇಂಬರ್) ಪೈಪ್ ಹೊಡೆದು ಗಂಭೀರ ಅನಾಹುತ ಸಂಭವಿಸಿದೆ. ಪೈಪ್ ಸಿಡಿದ ಪರಿಣಾಮ ಕೊಳಚೆ ನೀರು ರಸ್ತೆ ಮಧ್ಯೆ ಹರಿದು, ಸುತ್ತಮುತ್ತ ದುರ್ವಾಸನೆ ತೀವ್ರವಾಗಿ ವ್ಯಾಪಿಸಿದೆ.
ಈ ದುಸ್ಥಿತಿಯಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮೂಗು ಮುಚ್ಚಿಕೊಂಡೇ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಆರೋಗ್ಯಕ್ಕೂ ಅಪಾಯ ಉಂಟಾಗುವ ಆತಂಕ ವ್ಯಕ್ತವಾಗಿದೆ.
ನಗರ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಈ ಸಮಸ್ಯೆಗೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ತಕ್ಷಣ ಸಮಸ್ಯೆ ಪರಿಹರಿಸಲು ಆಗ್ರಹಿಸಿದ್ದಾರೆ.
ENGLISH SUMMARY..
Mysuru: Sewage Pipe Burst Causes Stench in Dattagalli
A UGD (chamber) pipe burst on 12th Main Road in Dattagalli, near Shakti Ganapati Temple, Mysuru, leading to sewage overflow on the road.
The foul smell has caused severe inconvenience to the public and motorists, forcing people to cover their noses while passing through.
Locals have expressed anger over the negligence of city corporation officials and demanded immediate action.
Key words: Mysuru, Sewage Pipe, Burst, Stench, Dattagalli







