ಬೆಂಗಳೂರು,ಮಾರ್ಚ್, 23,2026 (www.justkannada.in): ಸಿಎಂ ಸಿದ್ದರಾಮಯ್ಯ ಬರೆದ 2ನೇ ಪತ್ರಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಿದ್ದು ಹೆಚ್ಚುವರಿ 20% ಸಿಲಿಂಡರ್ ಪೂರೈಕೆಗೆ ಒಪ್ಪಿಗೆ ನೀಡಿದೆ ಎಂದು ಆಹಾರ ಇಲಾಖೆ ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದರು.
ಅಧಿಕಾರಿಗಳ ಜೊತೆ ಸಭೆ ಬಳಿಕ ಮಾತನಾಡಿದ ಆಹಾರ ಕೆ.ಎಚ್ ಮುನಿಯಪ್ಪ, ನಿತ್ಯ ರಾಜ್ಯಕ್ಕೆ 10 ಸಾವಿರ ಕಮರ್ಷಿಯಲ್ ಸಿಲಿಂಡರ್ ಸಿಗುತ್ತೆ. ಮುಂದಿನ ಸೋಮವಾರ ನಾವು ಮತ್ತೊಮ್ಮೆ ಸಭೆ ಸೇರುತ್ತೇವೆ. ಗೃಹಬಳಕೆ ಸಿಲಿಂಡರ್ ಗೆ 25 ದಿನ ಅವಕಾಶ ಕೊಟ್ಟಿದ್ದೇವೆ. ಕಮರ್ಷಿಯಲ್ ಸಿಲಿಂಡರ್ ಪೂರೈಕೆಯಲ್ಲಿ ಹೆಚ್ಚಳವಾಗಿದೆ ಎಂದರು.
ಕಮರ್ಷಿಯಲ್ ಸಿಲಿಂಡರ್ ಗಾಗಿ ರಿಜಿಸ್ಟ್ರೇಷನ್ ಕಡ್ಡಾಯವಾಗಿದೆ. ಗೇಲ್ ಕಂಪನಿಯಲ್ಲಿ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಬೇಕು. ಸಿಎಂ ಕೇಂದ್ರಕ್ಕೆ 2ನೇ ಪತ್ರ ಬರೆದ ಬಳಿಕ ಸ್ಪಂದನೆ ಸಿಕ್ಕಿದೆ ಹೆಚ್ಚುವರಿ 20% ಸಿಲಿಂಡರ್ ಕೊಡಲು ಕೇಂದ್ರ ಸರ್ಕಾರ ಒಪ್ಪಿದೆ ಎಂದರು.
Key words: Central, additional, 20% cylinder, supply, Minister, KH Muniappa







