ವಿಧಾನಸೌಧದ ನೂತನ ಮುಖ್ಯ ದ್ವಾರಕ್ಕೆ ಮಾ.25ರಂದು ಚಾಲನೆ ನೀಡಲಿರುವ ಸಿಎಂ ಸಿದ್ದರಾಮಯ್ಯ.

Chief Minister Siddaramaiah will inaugurate the newly built main entrance gate of Vidhana Soudha on March 25, Assembly Speaker U.T. Khader said. The gate, designed in traditional Karnataka style with intricate carvings, has been developed by the Karnataka Forest Development Corporation and the Public Works Departmen

 

ಮಂಗಳೂರು, ಮಾ.22: ರಾಜ್ಯ ರಾಜಕೀಯದ ಪ್ರತೀಕವಾಗಿರುವ ವಿಧಾನಸೌಧದ ನವೀಕೃತ ನೂತನ ಮುಖ್ಯ ಪ್ರವೇಶ ದ್ವಾರ ಮಾ.25ರಂದು ಅಧಿಕೃತವಾಗಿ ಉದ್ಘಾಟನೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸದಾಗಿ ನಿರ್ಮಿತ ಈ ದ್ವಾರವನ್ನು ಉದ್ಘಾಟಿಸಲಿದ್ದಾರೆ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ತಿಳಿಸಿದ್ದಾರೆ.

ಈ ಪ್ರವೇಶ ದ್ವಾರವು ಕರ್ನಾಟಕದ ಸಾಂಪ್ರದಾಯಿಕ ವಾಸ್ತುಶೈಲಿಯನ್ನು ಪ್ರತಿಬಿಂಬಿಸುವಂತೆ ಅತ್ಯಂತ ಸುಂದರ ಕೆತ್ತನೆಗಳಿಂದ ನಿರ್ಮಾಣಗೊಂಡಿದ್ದು, ರಾಜ್ಯದ ಸಾಂಸ್ಕೃತಿಕ ವೈಭವವನ್ನು ಹೊತ್ತಿದೆ. ಇದನ್ನು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ಹಾಗೂ ಲೋಕೋಪಯೋಗಿ ಇಲಾಖೆ ಸಂಯುಕ್ತವಾಗಿ ಅಭಿವೃದ್ಧಿಪಡಿಸಿದೆ.

ಇನ್ನಷ್ಟು ಸುಧಾರಣೆಗಾಗಿ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಬಳಿ ಹಾಗೂ ಹೈಕೋರ್ಟ್ ಭಾಗದ ಪ್ರವೇಶ ದ್ವಾರಗಳ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆ ಟೆಂಡರ್ ಆಹ್ವಾನಿಸಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ ಯು.ಟಿ.ಖಾದರ್‌ ತಿಳಿಸಿದರು.

ಇದೇ ವೇಳೆ, ವಿಧಾನಸೌಧಕ್ಕೆ ಭಾಗಶಃ ವಿದ್ಯುತ್ ಪೂರೈಸುವ ಸೌರ ಫಲಕ ಯೋಜನೆಗೂ ಮಾ.25ರಂದು ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದರು.

ವಿಧಾನಸೌಧ ಆವರಣದಲ್ಲಿರುವ ಬೀದಿ ನಾಯಿಗಳಿಗೆ ಶ್ವಾನ ಆಶ್ರಯ ತಾಣ ನಿರ್ಮಾಣ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಖಾದರ್, ಈ ಸಂಬಂಧ ನಮ್ಮ ಅಭಿಪ್ರಾಯ ಮತ್ತು ಯೋಜನೆಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಅಂತಿಮ ನಿರ್ಧಾರವನ್ನು ರಾಜ್ಯ ಸರ್ಕಾರವೇ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.

Key words: Vidhana Soudha, Main Gate, to Be Inaugurated, on March 25

SUMMARY: 

Vidhana Soudha Main Gate to Be Inaugurated on March 25

Chief Minister Siddaramaiah will inaugurate the newly built main entrance gate of Vidhana Soudha on March 25, Assembly Speaker U.T. Khader said.

The gate, designed in traditional Karnataka style with intricate carvings, has been developed by the Karnataka Forest Development Corporation and the Public Works Department.

Khader also said tenders have been invited to develop additional entry points near the grand steps and High Court side, with work to begin soon. A solar power system to partially supply electricity to Vidhana Soudha will also be launched on the same day.

Regarding a proposed shelter for stray dogs , he said the government will take the final decision.