Wednesday, September 9, 2026

BDA Apartments

Home Front Page ಸಿಎಂ ಮೂರುವರೆ ಗಂಟೆ ಖುಷಿಯಿಂದ ಬಜೆಟ್ ಓದಿಲ್ಲ-ಕೇಂದ್ರ ಸಚಿವ HDK  ವ್ಯಂಗ್ಯ

ಸಿಎಂ ಮೂರುವರೆ ಗಂಟೆ ಖುಷಿಯಿಂದ ಬಜೆಟ್ ಓದಿಲ್ಲ-ಕೇಂದ್ರ ಸಚಿವ HDK  ವ್ಯಂಗ್ಯ

ಮಂಡ್ಯ,ಮಾರ್ಚ್,7,2026 (www.justkannada.in):  ನಿನ್ನೆ ಸಿಎಂ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.

ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಸಿಎಂ ಮೂರುವರೆ ಗಂಟೆ ಖುಷಿಯಿಂದ ಬಜೆಟ್ ಓದಿಲ್ಲ ಪಾಪಾ ಕನ್ನಡದಲ್ಲಿ ಶಾಸಕರಿಗೆ ಸಂಧಿ ಪಾಠ ಮಾಡುತ್ತಿದ್ದರು. ಈಗ ಪಾಪ ಒಂದೊಂದು ಪದ ಬಳಕೆ ಮಾಡಲು ಶ್ರಮ ಪಡುತ್ತಿದ್ದರು ಎಂದು ಲೇವಡಿ ಮಾಡಿದರು.

ಬಜೆಟ್ ಹೊಡೆದ ಜನರ ಮೇಲೆ ಹೇಗೆ ಬೀಳುತ್ತೆ ನೋಡಬೇಕು. ಇದನ್ನು ದಾಖಲೆ ಬಜೆಟ್ ಅಂತ ಹೇಳಲು ಆಗುವುದಿಲ್ಲ. ಬಜೆಟ್ ನಿಂದ ಸಾಕಷ್ಟು ಸಮಸ್ಯೆ ಆಗುತ್ತದೆಂದು ತಜ್ಞರು ಹೇಳಿದ್ದಾರೆ. ಇದರ ಎಫೆಕ್ಟ್ ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ. ಕೇಂದ್ರ ಸರ್ಕಾರದ ವಿರುದ್ದ ಟೀಕೆ ಮಾಡುವುದನ್ನ ಬಿಟ್ಟರೆ ಇವರ ಶ್ರಮ ಏನಿದೆ?  ಹಿಂದಿನ ಸರ್ಕಾರದಲ್ಲಿ ತೀರ್ಮಾನ ಆಗಿದ್ದನ್ನ ಹೇಳಿದ್ದಾರೆ ಎಂದು ಹೆಚ್.ಡಿಕೆ ಕುಟುಕಿದರು.

Key words: CM Siddaramaiah, budget, Union Minister, HDK