Tuesday, September 22, 2026

BDA Apartments

ನಾವೇ ಮುಂದೆ ನಿಂತು ಟಿಪ್ಪು ಜಯಂತಿ ಆಚರಿಸುತ್ತೇವೆ- ಬಿಜೆಪಿ ಮುಖಂಡ ಹೇಳಿಕೆ… BD...
Home Front Page ನಾವೇ ಮುಂದೆ ನಿಂತು ಟಿಪ್ಪು ಜಯಂತಿ ಆಚರಿಸುತ್ತೇವೆ- ಬಿಜೆಪಿ ಮುಖಂಡ ಹೇಳಿಕೆ…

ನಾವೇ ಮುಂದೆ ನಿಂತು ಟಿಪ್ಪು ಜಯಂತಿ ಆಚರಿಸುತ್ತೇವೆ- ಬಿಜೆಪಿ ಮುಖಂಡ ಹೇಳಿಕೆ…

ಬೆಂಗಳೂರು,ಅ,25,2019(www.justkannada.in):  ತೀವ್ರ ವಿವಾದಕ್ಕೆ ಕಾರಣವಾಗಿರುವ ಟಿಪ್ಪು ಜಯಂತಿಯನ್ನ ರಾಜ್ಯ ಬಿಜೆಪಿ ಸರ್ಕಾರ ರದ್ಧು ಮಾಡಿದರೂ ಇತ್ತ ಬಿಜೆಪಿ ಮುಖಂಡರೊಬ್ಬರು ನಾವೇ ಮುಂದೆ ನಿಂತು ಟಿಪ್ಪು ಜಯಂತಿ ಆಚರಣೆ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.

ಬಿಜೆಪಿ ಸಂಸದ ಬಚ್ಚೇಗೌಡರ ಪುತ್ರ ಹಾಗೂ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಶರತ್ ಬಚ್ಚೇಗೌಡ ಈ ಹೇಳಿಕೆ ನೀಡಿದ್ದಾರೆ. ಹೊಸಕೋಟೆಯಲ್ಲಿ ನಡೆದ ಉರುಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಶರತ್ ಬಚ್ಚೇಗೌಡ, ಕೆಲವರು ಟಿಪ್ಪು ಜಯಂತಿ ಆಚರಿಸದಂತೆ ಹೇಳಿದ್ದಾರೆ. ಈ ಬಾರಿ ತಮ್ಮರಸನಹಳ್ಳಿಯಲ್ಲಿ ಟಿಪ್ಪು ಜಯಂತಿಯನ್ನ ಆಚರಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಆಚರಣೆಗೆ ತಂದಿದ್ದ ಟಿಪ್ಪು ಜಯಂತಿ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಹೀಗಾಗಿ ಈ ಇಂದಿನ ಬಿಜೆಪಿ ಸರ್ಕಾರ ಟಿಪ್ಪು ಜಯಂತಿ ಆಚರಣೆ ರದ್ಧು ಮಾಡಲು ನಿರ್ಧರಿಸಿದೆ.

 

Key words: We –celebrate- Tipu Jayanti- BJP leader- statement