Sunday, August 23, 2026

BDA Apartments

Home Front Page ಸೂಪರ್ ಕೂಲ್ ಆಸಿಸ್ ಪ್ರಧಾನಿ: ಕ್ರಿಕೆಟ್ ಆಟಗಾರರಿಗೆ ಡ್ರಿಂಕ್ಸ್ ವಿತರಿಸಿದ ಸ್ಕಾಟ್ ಮ್ಯಾರಿಸನ್

ಸೂಪರ್ ಕೂಲ್ ಆಸಿಸ್ ಪ್ರಧಾನಿ: ಕ್ರಿಕೆಟ್ ಆಟಗಾರರಿಗೆ ಡ್ರಿಂಕ್ಸ್ ವಿತರಿಸಿದ ಸ್ಕಾಟ್ ಮ್ಯಾರಿಸನ್

ಬೆಂಗಳೂರು, ಅಕ್ಟೋಬರ್ 25, 2019 (www.justkannada.in): ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮ್ಯಾರಿಸನ್ ಕ್ರಿಕೆಟ್ ಪಂದ್ಯದಲ್ಲಿ ಆಟಗಾರರಿಗೆ ಡ್ರಿಂಕ್ಸ್ ವಿತರಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಶ್ರೀಲಂಕಾ ತಂಡ ಗುರುವಾರ ಕ್ಯಾನ್ ಬೆರ್ರಾದ ಮನುಕಾ ಓವಲ್ ಮೈದಾನದಲ್ಲಿ ಪ್ರಧಾನಿ ಇಲೆವೆನ್ ತಂಡದ ವಿರುದ್ಧ ಅಭ್ಯಾಸ ಪಂದ್ಯ ನಡೆಯುತ್ತಿತ್ತು. ಪಂದ್ಯದಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಮೈದಾನಕ್ಕಿಳಿದು ಆಟಗಾರರಿಗೆ ನೆರವಾಗಿದ್ದಾರೆ.

12ನೇ ಆಟಗಾರನ ಬದಲಿಯಾಗಿ ಸ್ವತಃ ಆಸ್ಟ್ರೇಲಿಯಾದ ಪ್ರಧಾನಿ ಡ್ರಿಂಕ್ಸ್ ಬಾಟೆಲ್ ಹಿಡಿದು ಮೈದಾನಕ್ಕಿ ಓಡಿ ಬಂದಾಗ ಆಟಗಾರರು ಮಾತ್ರವಲ್ಲ ನೆರೆದಿದ್ದ ಅಭಿಮಾನಿಗಳು ಕ್ಷಣಕಾಲ ಅಚ್ಚರಿಗೆ ಒಳಗಾದರು.