ಬೆಂಗಳೂರು,ಫೆಬ್ರವರಿ,18,2026 (www.justkannada.in): ಮುಂದಿನ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಅಲ್ಲ ಎನ್ ಡಿಎ 140ರಿಂದ 150 ಸ್ಥಾನ ಗೆಲ್ಲುತ್ತೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ರಾಜ್ಯ ಬಿಜೆಪಿ ಜೆಡಿಎಸ್ ಮೈತ್ರಿಯಲ್ಲಿ ಗೊಂದಲ ವಿಚಾರ ಕುರಿತು ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಈ ವಿಚಾರಗಳು ನಾಲ್ಕುಗೋಡೆಗಳ ಒಳಗೆ ಚರ್ಚೆ ಆಗಬೇಕು. ಹಾದಿಬೀದಿಯಲ್ಲಿ ಚರ್ಚಿಸಿ ಇತ್ಯರ್ಥವಾಗುವ ವಿಚಾರ ಅಲ್ಲ ಲೋಕಸಭೆ ಚುನಾವಣೆಯಲಿಂದಲೂ ಎರಡೂ ಪಕ್ಷಗಳ ಮೈತ್ರಿ ಇದೆ. ಅಂದಿನಿಂದಲೂ ನಮ್ಮನ್ನ ಅತ್ಯಂತ ಗೌರವದಿಂದ ನೋಡಿಕೊಂಡಿದ್ದಾರೆ. ಅದರಲ್ಲಿ ಯಾವುದೇ ಎರಡನೇ ಪ್ರಶ್ನೆ ಇಲ್ಲ ಈ ಮೈತ್ರಿಗೆ ಬಿಜೆಪಿ ಹೈಕಮಾಂಡ್ ನಾಯಕರ ಮಾರ್ಗದರ್ಶನ ಇದೆ . ಬಿಜೆಪಿಯಾಗಿರಲಿ ಜೆಡಿಎಸ್ ಆಗಿರಲಿ ಯಾರು ಕೂಡ ಹೊರಗೆ ಬಂದು ಮಾತನಾಡಬಾರದು. ಸಮಸ್ಯೆ ಉದ್ಬವ ಆಗಿರೋದು ಯಾವುದೋ ಎರಡು ಜಿಲ್ಲೆಯಲ್ಲಿ. ಅಲ್ಲಿನ ಮೂರ್ನಾಲ್ಕು ಜನ ಹೊರಗಡೆ ಮಾತಾಡಿದ್ದಾರೆ. ಇವೆಲ್ಲವೂ ಸಾರ್ವಜನಿಕ ವಲಯದಲ್ಲಿ ಹೊರಗಡೆ ಬಂದಿರುವ ವಿಚಾರ ಎಂದರು.
ಬಿಜೆಪಿ ಜೆಡಿಎಸ್ ಅಲ್ಲ ಎನ್ ಡಿಎ 140 ರಿಂದ 150ಸ್ಥಾನ ಗೆಲ್ಲುತ್ತೆ ಬರೆದಿಟ್ಟುಕೊಳ್ಳಿ ಎಂದು ಹೇಳಿದ ನಿಖಿಲ್ ಕುಮಾರಸ್ವಾಮಿ ನಾವು ಮೈತ್ರಿ ಧರ್ಮವನ್ನ ಪಾಲಿಸುತ್ತೇವೆ ಲೋಕಸಭೆ ಗೆದ್ದಂತೆ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Key words: NDA, will, win 140 to 150 seats, Nikhil Kumaraswamy







