Sunday, August 23, 2026

BDA Apartments

Home Front Page ಸಿದ್ದರಾಮಯ್ಯ ಕೊಟ್ಟ ಮಾತಿಗೆ ತಪ್ಪೋದಿಲ್ಲ ಎಂಬ ನಂಬಿಕೆ ಇದೆ- ಶಾಸಕ ರಂಗನಾಥ್

ಸಿದ್ದರಾಮಯ್ಯ ಕೊಟ್ಟ ಮಾತಿಗೆ ತಪ್ಪೋದಿಲ್ಲ ಎಂಬ ನಂಬಿಕೆ ಇದೆ- ಶಾಸಕ ರಂಗನಾಥ್

ಬೆಂಗಳೂರು,ಫೆಬ್ರವರಿ,18,2026 (www.justkannada.in): ಅಧಿಕಾರ ಹಂಚಿಕೆ, ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ಸೂಚನೆ ಕೊಟ್ಟರೂ ಕಾಂಗ್ರೆಸ್  ಶಾಸಕರು ಪದೇ ಪದೇ ತಮ್ಮ ತಮ್ಮ ನಾಯಕರ ಪರ ಮಾತನಾಡುತ್ತಾ ಹೇಳಿಕೆಗಳನ್ನ ನೀಡುತ್ತಿದ್ದಾರೆ.

ಈ ಮಧ್ಯೆ ಇದೀಗ ಮಾತನಾಡಿರುವ ಕುಣಿಗಲ್ ಶಾಸಕ ರಂಗನಾಥ್,  ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತಿಗೆ ತಪ್ಪೋದಿಲ್ಲ ಎಂದು ನಂಬಿದ್ದೇವೆ. ಅದೇ ವಿಶ್ವಾಸದಲ್ಲಿ ನಾವಿದ್ದೇವೆ. ಸೂಕ್ತ ಸಮಯದಲ್ಲಿ ಅವರೇ ಜನತೆಗೆ ಉತ್ತರ ಕೊಡುತ್ತಾರೆ ಎಂದರು.

ಅಧಿಕಾರದ ಒಪ್ಪಂದ ಆಗಿದ್ದರೆ ಅದರ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೇ ಉತ್ತರ ಕೊಡುತ್ತಾರೆ ಅದಕ್ಕಾಗಿ ನಾವು ಭರವಸೆಯಿಂದ ಇದ್ದೇವೆ ಎಂದು  ಶಾಸಕ ರಂಗನಾಥ್ ತಿಳಿಸಿದ್ದಾರೆ.

Key words: power sharing, CM, Siddaramaiah, MLA, Ranganath