ಮೈಸೂರಿನಲ್ಲಿ ಫೆ.14 ರಂದು ಹನುಮಾನ್ ಚಾಲೀಸಾ ಪಾರಾಯಣ.

ಮೈಸೂರು,ಫೆಬ್ರವರಿ,10,2026 (www.justkannada.in): ಮೈಸೂರಿನಲ್ಲಿ ಫೆಬ್ರವರಿ 14 ರಂದು ಹನುಮಾನ್ ಚಾಲೀಸಾ ಪಾರಾಯಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿರುವ ಲಕ್ಷಾಂತರ ಭಕ್ತ ಸಮೂಹದ ಸಮ್ಮುಖದಲ್ಲಿ ಮಹಾಯಜ್ಞ ನಡೆಯಲಿದ್ದು, ದೇಶದ ವಿವಿಧ ರಾಜ್ಯಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಹನುಮಾನ್ ಚಾಲೀಸಾ ಪಠಣ ಮಾಡಲಿದ್ದಾರೆ.

ಈ ಸಂಬಂಧ ಸುದ್ದಿ ಗೋಷ್ಠಿ ಮೂಲಕ ಮಾಹಿತಿ ಹಂಚಿಕೊಂಡ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, 2016 ರ ಬಳಿಕ ಸಾಂಸ್ಕೃತಿಕ ನಗರಿಯಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ನಡೆಯುತ್ತಿದ್ದು  ಸುಲಲಿತ ಕನ್ನಡದಲ್ಲೇ ಕನ್ನಡ ಹನುಮಾನ್ ಚಾಲೀಸ್ ಪಾರಾಯಣ ಮಾಡಲಾಗುತ್ತದೆ.

ಫೆಬ್ರವರಿ 14 ಮತ್ತು 15 ರಂದು  ಎರಡು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ. ಫೆಬ್ರವರಿ 14 ಹನುಮಾನ್ ಚಾಲೀಸಾ  ಫೆ.15 ರಂದು ಶಿವರಾತ್ರಿ ಮಹಾ ಜಾಗರಣೆ, ಗಿರಿಜಾ ಕಲ್ಯಾಣ, ಸಾಮೂಹಿಕ ಪಾರಾಯಣ ಕಾರ್ಯಕ್ರಮ ನೆರವೇರಲಿದೆ ಎಂದು ತಿಳಿಸಿದರು.

Key words: Hanuman Chalisa recitation, Mysore, Feb. 14