ಬೆಂಗಳೂರು,ಫೆಬ್ರವರಿ,7,2026 (www.justkannada.in): ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಯಾಗಿದ್ದ ಶಂಕಿತ ಭಯೋತ್ಪಾದಕ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಸಾಧಿಕ್ ಪಾಷಾ (47) ಮೃತಪಟ್ಟ ಶಂಕಿತ ಭಯೋತ್ಪಾದಕ, ಆತ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಎನ್ನಲಾಗಿದೆ. ಲೋಬಿಪಿ ಮತ್ತು ಹೈಶುಗರ್ ನಿಂದ ಬಳಲುತ್ತಿದ್ದ ಎನ್ನಲಾಗಿದೆ.
ಸದ್ದುಗುಂಟೆ ಪಾಳ್ಯದಲ್ಲಿ ನಡೆದ ಸ್ಪೋಟಕ ವಸ್ತು ಸಂಗ್ರಹ ಪ್ರಕರಣದಲ್ಲಿ ಈತನನನ್ನು ಪೊಲೀಸರು ಬಂಧಿಸಿದ್ದರು. 2020 ರಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಈತನನ್ನು ಇರಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐಎ 6 ಆರೋಪಿಗಳನ್ನು ಬಂಧಿಸಿತ್ತು.
Key words: Suspected terrorist, dies, Parappana Agrahara, jail







