ಮಂಗಳೂರು,ಫೆಬ್ರವರಿ,6,2026 (www.justkannada.in): ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಆಗಿ ಮುಂದುವರೆಯುತ್ತಾರೆ. ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ ಎಂದು ಹೇಳಿಕೆ ನೀಡಿದ್ದ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಡಿಸಿಎಂ ಡಿಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆ ಶಿವಕುಮಾರ್, ಯತೀಂದ್ರ ಅವರೇ ನಮ್ಮ ಪಕ್ಷ ಹೈಕಮಾಂಡ್ . ಕಾಂಗ್ರೆಸ್ ಪಕ್ಷದ ಹೈಕಮಾಂಡ್. ಅವರು ಏನು ಹೇಳುತ್ತಾರೋ ಅದನ್ನು ಗೌರವದಿಂದ ಸ್ವೀಕಾರ ಮಾಡೋಣ ಎಂದು ಕುಟುಕಿದರು.
ಯತೀಂದ್ರ ಅವರನ್ನೇ ನಮ್ಮ ಹೈಕಮಾಂಡ್ ಅಂತ ಸ್ವೀಕಾರ ಮಾಡೋಣ. ನಾನು ಈ ಬಗ್ಗೆ ಯಾರಿಗೂ ಪ್ರತಿಕ್ರಿಯೆ ಕೊಡಲ್ಲ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
Key words: MLC, Yatindra, high command, DCM, DK Shivakumar







