ಆತ್ಮಹತ್ಯೆಗೆ ಪ್ರಚೋದನೆ : ಯುವತಿ ಸಾವಿಗೆ ಕಾರಣರಾದ ಆಕೆ ಪತಿ, ಅತ್ತೆ ಹಾಗೂ ಮಾವನಿಗೆ ನಿರೀಕ್ಷಣಾ ಜಾಮೀನು ನೀಡಲು ಕೋರ್ಟ್‌  ನಿರಾಕರಣೆ.

The court has refused anticipatory bail to the husband, mother-in-law, and father-in-law accused of abetting the suicide of a young woman. Sampreetha (28) allegedly died by hanging due to mental and physical harassment by her husband Kushal and his mother, including a forced abortion. She left a death note blaming them for her death. The Mysuru Fifth Additional District and Sessions Court rejected their bail plea considering the seriousness of the offence, and police are searching for the accused.

 

ಮೈಸೂರು, ಫೆ.೦೪,೨೦೨೬: ಪತಿ ಹಾಗೂ ಅತ್ತೆಯು ನೀಡುತ್ತಿದ್ದ ಮಾನಸಿಕ ಹಾಗೂ ದೈಹಿಕ ಕಿರುಕುಳದಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದ ಯುವತಿಯ ಪತಿ ಹಾಗೂ ಅತ್ತೆ-ಮಾವನಿಗೆ ನಿರೀಕ್ಷಣಾ ಜಾಮೀನು ನೀಡಲು ಮೈಸೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ನಿರಾಕರಿಸಿದೆ.

ಪ್ರಕರಣದ ವಿವರ:

ಮೈಸೂರಿನ ದಟ್ಟಗಳ್ಳಿಯಲ್ಲಿ ಅಡುಗೆ ಸಹಾಯಕರಾಗಿ ದುಡಿಯುತ್ತಿರುವ ಸಹದೇವ ರಾವ್ ಅವರ ಮಗಳಾದ ಸಂಪ್ರೀತಾ (28 ವರ್ಷ) ದಕ್ಷಿಣ ಕೊಡಗಿನ ಕಳತ್ ಮಾಡು ಗ್ರಾಮದ ನಿವಾಸಿ ವಸಂತ್ ಎಂ ಯು ಅವರ ಪುತ್ರ ಕುಶಾಲ್ ಮುಕ್ಕಾಟಿ ಎಂಬಾತನನ್ನು ಪ್ರೀತಿಸಿ ವಿವಾಹವಾಗಿದ್ದಳು.ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಕ್ವಾಂಟಿಫೈ ಅನಾಲಿಟಿಕ್ಸ್ ಸಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಸೈಬರ್ ಸೆಕ್ಯೂರಿಟಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಕುಶಾಲ್ ವಿವಾಹದ ನಂತರ ತನ್ನ ತಾಯಿಯ ಪ್ರಚೋದನೆಯ ಮೇರೆಗೆ ಪತ್ನಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ಆಕೆಯ ಪತಿ ಕುಶಾಲ್ ಆಕೆ ಗರ್ಭಿಣಿ ಆದಾಗ ಬಲವಂತವಾಗಿ ಗರ್ಭಪಾತ ಮಾಡಿಸಿದ್ದ.ನಂತರ ಆಕೆಯನ್ನು ಮನೆಯಿಂದ ಓಡಿಸಿ ತಲೆ ಮರೆಸಿಕೊಂಡಿದ್ದ.

ಫೋನ್ ಕರೆಗೂ ಸಿಗುತ್ತಿರಲಿಲ್ಲ.ಮನನೊಂದ ಸಂಪ್ರೀತಾ ಮೈಸೂರಿನ ದಟ್ಟಗಳ್ಳಿಯಲ್ಲಿರುವ  ತನ್ನ ತವರು ಮನೆಗೆ ಬಂದು ಈ ವಿಚಾರಗಳನ್ನು ತನ್ನ ಪೋಷಕರಿಗೆ ತಿಳಿಸಿದ್ದಳು.ನಂತರ ಮನನೊಂದು ತನ್ನ ಸಾವಿಗೆ ತನ್ನ ಪತಿ ಹಾಗೂ ಅತ್ತೆಯ ಕಿರುಕಳವೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು 10.12.2025ರಂದು ಸಂಜೆ ನೇಣಿಗೆ ಶರಣಾಗಿದ್ದರು.

ಪ್ರಕರಣ ದಾಖಲಿಸಿಕೊಂಡ ಮೈಸೂರಿನ ಕುವೆಂಪು ನಗರ ಪೊಲೀಸರು ನ್ಯಾಯಾಲಯಕ್ಕೆ ಪ್ರಥಮ ವರ್ತಮಾನ ವರದಿ ಸಲ್ಲಿಸಿ ತನಿಖೆ ನಡೆಸುತ್ತಿದ್ದರು.

ಈ ನಡುವೆ ಬಂಧನದ ಭೀತಿಯಿಂದ ಪಾರಾಗಲು ಸಂಪ್ರೀತಾಳ ಪತಿ ಕುಶಾಲ್,ಆತನ ತಂದೆ ವಸಂತ ಹಾಗೂ ತಾಯಿ ರೇಣುಕಾ ನಿರೀಕ್ಷಣಾ ಜಾಮೀನು ಕೋರಿ ಮೈಸೂರಿನ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.ಅರ್ಜಿಯ ವಿಚಾರಣೆ ನಡೆಸಿದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಕೆ.ಎನ್.ರೂಪಾ ಅವರು ಅಪರಾಧದ ಗಂಭೀರತೆಯನ್ನು ಪರಿಗಣಿಸಿ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿ ಅರ್ಜಿಯನ್ನು ತಿರಸ್ಕರಿಸಿದ್ದಾರೆ.

ರಾಜ್ಯದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಎ.ಎನ್. ಮಧು ತಕರಾರು ಸಲ್ಲಿಸಿ ವಾದಿಸಿದ್ದರು.

ಸಂಪ್ರೀತಾ ಅವರಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ ಆಕೆಯು ಆತ್ಮಹತ್ಯೆಗೆ ಶರಣಾಗಲು ಪ್ರಚೋದಿಸಿ ಆಕೆಯ ಸಾವಿಗೆ ಕಾರಣರಾಗಿ ತಲೆ ಮರೆಸಿಕೊಂಡಿರುವ ಆಕೆಯ ಪತಿ ಕುಶಾಲ್ ಹಾಗೂ ಆತನ ತಾಯಿಯ ಬಂಧನಕ್ಕೆ ಕುವೆಂಪು ನಗರ ಪೊಲೀಸರು ಬಲೆ ಬೀಸಿದ್ದಾರೆ.

key words: The court has refused, anticipatory bail, to the husband, mother-in-law, and father-in-law, accused of abetting, the suicide of a young woman.

SUMMARY:

The court has refused anticipatory bail to the husband, mother-in-law, and father-in-law accused of abetting the suicide of a young woman.

Sampreetha (28) allegedly died by hanging due to mental and physical harassment by her husband Kushal and his mother, including a forced abortion. She left a death note blaming them for her death. The Mysuru Fifth Additional District and Sessions Court rejected their bail plea considering the seriousness of the offence, and police are searching for the accused.