ಕೇಂದ್ರ ಬಜೆಟ್: ಎಂಎಸ್ ಎಂಇಗಳಿಗೆ ಶಕ್ತಿ, IT, ಉತ್ಪಾದನಾ ವಲಯಕ್ಕೆ ವೇಗ-FKCCI ಅಧ್ಯಕ್ಷೆ ಉಮಾ ರೆಡ್ಡಿ

ಬೆಂಗಳೂರು,ಫೆಬ್ರವರಿ,2,2026 (www.justkannada.in):  ಕೇಂದ್ರ ಬಜೆಟ್ ಎಂ.ಎಸ್.ಎಂ.ಇ (MSME) ಗಳಿಗೆ ಶಕ್ತಿ, IT ಮತ್ತು ಉತ್ಪಾದನಾ ವಲಯಕ್ಕೆ ವೇಗ, ಮೂಲಸೌಕರ್ಯ ನಿರ್ಮಾಣ, ಹಾಗೂ ವ್ಯವಹಾರ ಸುಲಭತೆಗೆ ಸರಳೀಕರಣಕ್ಕೆ ಸಹಕಾರಿಯಾಗಿದೆ ಎಂದು ಫೆಡರೇಶನ್ ಆಫ್ ಕರ್ನಾಟಕ ಚೇಂಬರ್‌ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ(FKCCI) ಅಧ್ಯಕ್ಷೆ ಉಮಾರೆಡ್ಡಿ ಅಭಿಪ್ರಾಯ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ  ಎಫ್ ಕೆಸಿಸಿಐ ಅಧ್ಯಕ್ಷೆ ಉಮಾರೆಡ್ಡಿ, ಕೇಂದ್ರ ಬಜೆಟ್ 2026–27 ಭವಿಷ್ಯ ನೋಟ ಹೊಂದಿದ ಮತ್ತು ಕಾರ್ಯಪ್ರವೃತ್ತಿಯ ಬಜೆಟ್ ಆಗಿದ್ದು, ಹಣಕಾಸು ಶಿಸ್ತನ್ನು ಕಾಪಾಡಿಕೊಂಡೇ ಭಾರತದ ಆರ್ಥಿಕ ಬೆಳವಣಿಗೆಯ ವೇಗವನ್ನು ಮತ್ತಷ್ಟು ಬಲಪಡಿಸುತ್ತದೆ. ಉತ್ಪಾದನಾ ವಲಯಕ್ಕೆ ನೀಡಿರುವ ಬಲವಾದ ಉತ್ತೇಜನ, IT ಕ್ಷೇತ್ರದ ವೃದ್ಧಿ, ಎಂ.ಎಸ್.ಎಂ.ಇ(MSME) ಹಣಕಾಸು ಸೌಲಭ್ಯಗಳು, ಮೂಲಸೌಕರ್ಯ ವಿಸ್ತರಣೆ ಹಾಗೂ ಸುಲಲಿತ ವ್ಯವಹಾರ (Ease of Doing Business) ಮೇಲಿನ ಮೇಲಿನ ಬಲವಾದ ಒತ್ತು ಕೈಗಾರಿಕೆಗಳ ಅಗತ್ಯಗಳು ಮತ್ತು ಉದ್ಯೋಗ ಸೃಷ್ಟಿಯ ಆದ್ಯತೆಗಳಿಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ. ನಂಬಿಕೆ ಆಧಾರಿತ ಆಡಳಿತ, ಅನುಸರಣೆಗಳ ಸರಳೀಕರಣ ಮತ್ತು ನಿರಂತರ ಸಾರ್ವಜನಿಕ ಮೂಲಧನ ವೆಚ್ಚಕ್ಕೆ ನೀಡಿರುವ ಮಹತ್ವವನ್ನು FKCCI ಹರ್ಷದಿಂದ ಸ್ವಾಗತಿಸುತ್ತದೆ. ಇವುಗಳೆಲ್ಲಾ ಸೇರಿ ಉದ್ಯಮಗಳಿಗೆ ಸ್ಥಿರ ಹಾಗೂ ನಿರೀಕ್ಷಿತ ನೀತಿ ವಾತಾವರಣವನ್ನು ರೂಪಿಸುತ್ತವೆ ಎಂದಿದ್ದಾರೆ.

10,000 ಕೋಟಿ ರೂ. ಮೌಲ್ಯದ SME ಬೆಳವಣಿಗೆ ನಿಧಿ, ಸಿಪಿಎಸ್ ಇ ಖರೀದಿಗಳಲ್ಲಿ TReDS ಅನ್ನು ಕಡ್ಡಾಯಗೊಳಿಸುವುದು, ಪರಂಪರೆಯ ಕೈಗಾರಿಕಾ ಕ್ಲಸ್ಟರ್‌ಗಳ ಪುನರುಜ್ಜೀವನ, ಹಾಗೂ ಉದ್ದೇಶಿತ ತೆರಿಗೆ ಮತ್ತು ಕಸ್ಟಮ್ಸ್ ಸುಧಾರಣೆಗಳು ಎಂಎಸ್ ಎಂಇಗಳ ದ್ರವ್ಯತೆ, ಸ್ಪರ್ಧಾತ್ಮಕತೆ ಮತ್ತು ಅಧಿಕೃತೀಕರಣವನ್ನು ಗಣನೀಯವಾಗಿ ಸುಧಾರಿಸಲಿವೆ. ಈ ಕ್ರಮಗಳು ಭಾರತದ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದರ ಜೊತೆಗೆ ರಫ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಮಹತ್ವದ ಪಾತ್ರ ವಹಿಸಲಿವೆ.”

ಎಂಎಸ್ ಎಂಇಗಳು, ಸ್ಟಾರ್ಟ್-ಅಪ್‌ಗಳು, ತಂತ್ರಜ್ಞಾನ ಸಂಸ್ಥೆಗಳು, ಐಟಿ ಹಾಗೂ ಡಿಜಿಟಲ್ ಸೇವೆಗಳು ಮತ್ತು ರಫ್ತುಮುಖಿ ಉತ್ಪಾದನಾ ಘಟಕಗಳ ಹೆಚ್ಚಿನ ಸಾಂದ್ರತೆಯನ್ನು ಹೊಂದಿರುವ ಕರ್ನಾಟಕಕ್ಕೆ, ಎಂಎಸ್ ಎಂಇ ಕ್ರೆಡಿಟ್ ಹರಿವು, ಲಾಜಿಸ್ಟಿಕ್ಸ್ ಮೂಲಸೌಕರ್ಯ, ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಉತ್ಪಾದನೆ, ಹಾಗೆಯೇ ಟಿಯರ್–II ಮತ್ತು ಟಿಯರ್–III ನಗರಗಳ ಅಭಿವೃದ್ಧಿಯ ಮೇಲಿನ ಬಜೆಟ್‌ ನ ಗಮನ ವಿಶೇಷವಾಗಿ ಉತ್ತೇಜನಕಾರಿಯಾಗಿದೆ. TReDS ವ್ಯಾಪ್ತಿಯ ವಿಸ್ತರಣೆ, ಎಂಎಸ್ ಎಂಇಗಳಿಗೆ ವೃತ್ತಿಪರ ಅನುಸರಣೆ ಬೆಂಬಲ, ಕ್ಲಸ್ಟರ್ ಪುನಶ್ಚೇತನ ಮತ್ತು ವ್ಯವಹಾರ ಸುಲಭತೆಯ ಸುಧಾರಣೆಗಳು ಕರ್ನಾಟಕದ ಕೈಗಾರಿಕಾ ಕಾರಿಡಾರ್‌ ಗಳು ಹಾಗೂ ಇತರ ಬೆಳವಣಿಗೆ ಕೇಂದ್ರಗಳಿಗೆ ನೇರ ಲಾಭವನ್ನು ನೀಡಲಿವೆ. ಈ ಕ್ರಮಗಳು ಕೈಗಾರಿಕಾ ವೃದ್ಧಿ, ನಾವೀನ್ಯತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮುಂಚೂಣಿಯ ಚಾಲಕನಾಗಿರುವ ಕರ್ನಾಟಕದ ಸ್ಥಾನವನ್ನು ಇನ್ನಷ್ಟು ಬಲಪಡಿಸುತ್ತವೆ ಎಂದು ಎಫ್ ಕೆಸಿಸಿಐ ವಿಶ್ವಾಸ ವ್ಯಕ್ತಪಡಿಸುತ್ತದೆ ಎಂದು ಉಮಾರೆಡ್ಡಿ ತಿಳಿಸಿದ್ದಾರೆ.

ಕರ್ನಾಟಕದ ಪಾರಂಪರಿಕ ಮತ್ತು ಕೃಷಿ ಆಧಾರಿತ ಕೈಗಾರಿಕೆಗಳಾದ ಬೀಜಗಳು/ಕಾಯಿ ಉತ್ಪನ್ನಗಳು, ತೆಂಗಿನಕಾಯಿ ಮತ್ತು ಶ್ರೀಗಂಧ ಮುಂತಾದ ವಲಯಗಳನ್ನು ಬಲಪಡಿಸಲು ಭಾರತ ವಿಸ್ತಾರ್ (Bharat Vistar) ಉಪಕ್ರಮದ ಮಹತ್ವವನ್ನು FKCCI ಒತ್ತಿಹೇಳುತ್ತದೆ. ಇದರಿಂದ ವ್ಯಾಪಕ ಮಾರುಕಟ್ಟೆ ಪ್ರವೇಶ, ಮೌಲ್ಯವರ್ಧನೆ ಮತ್ತು MSMEಗಳು ಹಾಗೂ ಗ್ರಾಮೀಣ ಉತ್ಪಾದಕರ ಆದಾಯ ಹೆಚ್ಚಳ ಸಾಧ್ಯವಾಗಲಿದೆ.

ಕರ್ನಾಟಕಕ್ಕೆ ಲಾಭವಾಗುವ ಹೈ-ಸ್ಪೀಡ್ ರೈಲು ಕಾರಿಡಾರ್‌ಗಳ ಪ್ರಸ್ತಾವನೆ ಸ್ವಾಗತಾರ್ಹವಾಗಿದೆ. ಬೆಂಗಳೂರಿನಿಂದ ಪ್ರಮುಖ ಆರ್ಥಿಕ ಕೇಂದ್ರಗಳಿಗೆ ವೇಗವಾದ ಸಂಪರ್ಕವು ಉತ್ಪಾದಕತೆ, ಲಾಜಿಸ್ಟಿಕ್ಸ್ ಕಾರ್ಯಕ್ಷಮತೆ ಮತ್ತು ಪ್ರಾದೇಶಿಕ ಬೆಳವಣಿಗೆಯನ್ನು ಉತ್ತೇಜಿಸಲಿದೆ. ಒಟ್ಟಾರೆ, ಈ ಬಜೆಟ್ ಬೆಳವಣಿಗೆ, ಸುಧಾರಣೆಗಳು ಮತ್ತು ಸಮಾವೇಶಿತ ಅಭಿವೃದ್ಧಿಯ ನಡುವೆ ಸಮತೋಲನ ಸಾಧಿಸಿದ್ದು, ‘ವಿಕ್ಸಿತ್ ಭಾರತ್’ ಗುರಿಯತ್ತ ಭಾರತದ ಪ್ರಯಾಣವನ್ನು ವೇಗಗೊಳಿಸಲು ಬಲವಾದ ಅಡಿಪಾಯವನ್ನು ಒದಗಿಸುತ್ತದೆ ಎಂದು ಉಮಾ ರೆಡ್ಡಿ ತಿಳಿಸಿದ್ದಾರೆ.

Key words: Union Budget, MSME, speed, IT,  FKCCI President, Uma Reddy