Tuesday, August 4, 2026

BDA Apartments

Home Front Page ಪಿಒಕೆಯಲ್ಲಿ ಉಗ್ರರ ಕ್ಯಾಂಪ್ ಮೇಲೆ ಭಾರತೀಯ ಸೇನೆ ದಾಳಿ:  50 ಉಗ್ರರು ಫಿನೀಶ್….

ಪಿಒಕೆಯಲ್ಲಿ ಉಗ್ರರ ಕ್ಯಾಂಪ್ ಮೇಲೆ ಭಾರತೀಯ ಸೇನೆ ದಾಳಿ:  50 ಉಗ್ರರು ಫಿನೀಶ್….

ಜಮ್ಮು ಕಾಶ್ಮೀರ,ಅ,22,2019(www.justkannada.in):  ಪದೇ  ಪದೇ ಕದನ ವಿರಾಮ ಉಲ್ಲಂಘಿಸುತ್ತಿದ್ದ ಪಾಕ್ ಗೆ ಭಾರತೀಯ ಸೇನೆ ಇದೀಗ ಮತ್ತೊಂದು ಎಚ್ಚರಿಕೆ ನೀಡಿದೆ. ಹೌದು, ಪಿಒಕೆಯಲ್ಲಿದ್ದ 7 ಉಗ್ರರ ಕ್ಯಾಂಪ್ ಮೇಲೆ ಭಾರತೀಯ ಸೇನೆ ದಾಳಿ ನಡೆಸಿ 50 ಉಗ್ರರನ್ನ ಹತ್ಯೆ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಉಗ್ರರ ಕ್ಯಾಂಪ್ ಮೇಲೆ ಬೋಪೊರ್ಸ್ ಫಿರಂಗಿಗಳ ಮೂಲಕ ಭಾರತೀಯ ಸೇನೆ ದಾಳಿ ನಡೆಸಿ 50 ಉಗ್ರರನ್ನ ಹೊಡೆದುರುಳಿಸಿದೆ.  3ಸಾವಿರ ಶೆಲ್ ಗಳ ದಾಳಿ ನಡೆಸಿದ್ದು ಈ ದಾಳಿಯಲ್ಲಿ ಪಾಕ್ ನ 7 ಕಮಾಂಡೋಗಳ ಹತ್ಯೆಯಾಗಿದೆ. ಹಾಗೆಯೇ  ಪಾಕ್ ಬ್ರಿಗೇಡ್ ಮುಖ್ಯ ಕಚೇರಿ ಮೇಲೂ ದಾಳಿ ಮಾಡಲಾಗಿದೆ.

ಭಾರತೀಯ ಸೇನೆ ದಾಳಿ ವೇಳೆ ಪಿಒಕೆಯ ನೊಸೆರಿ ಜಲಾಶಯಕ್ಕೆ ಹಾನಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.  ಭಾರತೀಯ ಸೇನೆ ದಾಳಿ ನಡೆಸುತ್ತಿದ್ದಂತೆ ಪಾಕ್ ಸೇನೆ ಮುಖ್ಯಸ್ಥ ತುರ್ತು ಸಭೆ ಕರೆದಿದ್ದಾರೆ.

Key words: Indian Army- attacks -terrorist camp – PoK-  Finish.