Wednesday, August 12, 2026

BDA Apartments

Home Crime ಬಲೂನ್ ಗ್ಯಾಸ್ ಬ್ಲಾಸ್ಟ್ ದುರಂತ: ಇಬ್ಬರು ಮಹಿಳೆಯರ ಸ್ಥಿತಿ ಚಿಂತಾಜನಕ: ಕಣ್ಣೀರಿಟ್ಟ ಕುಟುಂಬ

ಬಲೂನ್ ಗ್ಯಾಸ್ ಬ್ಲಾಸ್ಟ್ ದುರಂತ: ಇಬ್ಬರು ಮಹಿಳೆಯರ ಸ್ಥಿತಿ ಚಿಂತಾಜನಕ: ಕಣ್ಣೀರಿಟ್ಟ ಕುಟುಂಬ

ಮೈಸೂರು,ಡಿಸೆಂಬರ್,26,2025 (www.justkannada.in): ಮೈಸೂರು ಅರಮನೆ ಬಳಿ ಸಂಭವಿಸಿದ ಬಲೂನ್ ಗ್ಯಾಸ್ ಬ್ಲಾಸ್ಟ್ ದುರಂತದಲ್ಲಿ ಗಾಯಗೊಂಡು ಕೆ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆ ಮಂಜುಳ (38) ಎಂಬುವವರ ಸ್ಥಿತಿ ಚಿಂತಾಜನಕವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ನಂಜನಗೂಡಿನ ಚಾಮಲಾಪುರದ ನಿವಾಸಿಯಾಗಿದ್ದ ಮಹಿಳೆ ಮಂಜುಳ ನಿನ್ನೆ ಅರಮನೆ ನೋಡಲು ನಂಜನಗೂಡಿನಿಂದ ಮೈಸೂರಿಗೆ ಬಂದಿದ್ದರು. ಈ ವೇಳೆ ಅರಮನೆ ದೀಪಾಲಂಕಾರ ನೋಡಲು ಬಂದಾಗ ಈ ದುರಂತ ಸಂಭವಿಸಿದೆ.

ಅಕ್ಕನನ್ನ ಕಳೆದುಕೊಂಡು ಮಂಜುಳ ತಂಗಿ ರತ್ನ ಕಣ್ಣೀರು ಇಡುತ್ತಿದ್ದಾರೆ.  ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಅರಮನೆಯ ಲೈಟಿಂಗ್ ನೋಡಿಕೊಂಡು  ಬರುತ್ತೇನೆ ಎಂದು ಬಂದಿದ್ದರು. ನಮಗೂ ಪೇಪರ್ ನಲ್ಲಿ ನೋಡು ವಿಷಯ ಗೊತ್ತಾಗಿದೆ ಮಂಜುಳ ತಂಗಿ ರತ್ನ ಹೇಳಿದ್ದಾರೆ.

ಮಂಜುಳ ಅಣ್ಣ ನಾಗರಾಜು ಮಾತನಾಡಿ, ಅರಮನೆ ಲೈಟಿಂಗ್ ನೋಡಿಕೊಂಡು ಬರುತ್ತೇನೆ ಅಂತ ಹೇಳಿ ಬಂದಿದ್ದರು. ಅರಮನೆ ನೋಡಿಕೊಂಡು ಹೋಗಿರುವಾಗ ಇಂತಹ ದುರಂತ ಸಂಭವಿಸಿದೆ ಎಂದು ಕಣ್ಣೀರಿಟ್ಟಿದ್ದಾರೆ.

ಸಾವು ನೋವಿನ ಮಧ್ಯೆ ಹೋರಾಡುತ್ತಿರುವ ಮತ್ತೊಬ್ಬ ಮಹಿಳೆ; ಪುತ್ರಿಯ ಕಣ್ಣೀರು

ಬಲೂನ್ ಗ್ಯಾಸ್ ಬ್ಲಾಸ್ಟ್ ದುರಂತದಲ್ಲಿ ಗಾಯಗೊಂಡ ಮತ್ತೊಬ್ಬ ಮಹಿಳೆ ಲಕ್ಷ್ಮೀ ಎಂಬುವವರು  ಕೆ ಆರ್ ಆಸ್ಪತ್ರೆಯಲ್ಲಿ ಸಾವು ನೋವಿನ ಮಧ್ಯೆ ಹೋರಾಡುತ್ತಿದ್ದಾರೆ. ಬೆಂಗಳೂರಿನ ಕಾಮಾಕ್ಷಿ ಪಾಳ್ಯದ ನಿವಾಸಿ ಲಕ್ಷ್ಮೀ ಅರಮನೆ ನೋಡಲು ಮಗಳು ತನ್ನ ಕುಟುಂಬದ ಜೊತೆ ಬಂದಿದ್ದರು.  ಈ ಮಧ್ಯೆ ದೇವಸ್ಥಾನದಿಂದ ಅಂಬಾವಿಲಾಸ ಅರಮನೆ ಮುಂಭಾಗ ಹೋಗುವಾಗ ಈ ಘಟನೆ ಸಂಭವಿಸಿದೆ.

ಈ ಘಟನೆ ಕುರಿತು ಮಾತನಾಡಿರುವ ಲಕ್ಷ್ಮೀ ಮಗಳು ಡಿಂಪಲ್, ಬ್ಲ್ಯಾಸ್ಟ್ ಆದಾಗ ನನ್ನ ಅಮ್ಮನನ್ನ ನಾನು ಹುಡುಕುತ್ತಿದ್ದೆ. ಅಮ್ಮ ನಾನು ಎಲ್ಲಾ ಒಟ್ಟಿಗೆ ಅರಮನೆಯ ಬಳಿ ಹೋಗುತ್ತಿದ್ದವು. ಏಕಾಏಕಿ ಗ್ಯಾಸ್ ಬ್ಲಾಸ್ಟ್ ಆಯಿತು. ನಾನು ಸ್ವಲ್ಪ ದೂರು ಇದ್ದೆ ನನಗೆ ತಲೆ ಮಾತ್ರ ಪೆಟ್ಟಾಗಿದೆ. ಬ್ಲಾಸ್ಟ್ ಶಬ್ದಕ್ಕೆ ಎಲ್ಲಾ ಓಡಿ ಹೋಗುತ್ತಿದ್ದರು.ನಮ್ಮ ಅಮ್ಮ ಕೆಳಗಡೆ ಬಿದ್ದಿದ್ದರು. ನಾನು ಅಮ್ಮನನ್ನ ಹುಡುಕುತಿದ್ದವು ಎಂದು ಹೇಳುತ್ತಾ ಆಸ್ಪತ್ರೆಯಲ್ಲಿ ಅಮ್ಮನನ್ನ ನೋಡಲು ಮಗಳು ಡಿಂಪಲ್ ಕಣ್ಣೀರು ಹಾಕುತ್ತಿದ್ದಾಳೆ

ಘಟನೆ ಕುರಿತು ಲಕ್ಷ್ಮೀ ಅವರ ಪತಿ ರಾಜೇಶ್ ಮಾತನಾಡಿ, ಬೆಂಗಳೂರಿಂದ ಅರಮನೆ ನೋಡಲು ಮೈಸೂರಿಗೆ ಬಂದಿದ್ದವು. ಕುಟುಂಬ ಹೋಗುವಾಗ ಅರಮನೆಯ ಬಳಿ ಇಂತಹ ಘಟನೆ ನಡೆದಿದೆ. ಆಸ್ಪತ್ರೆಯಲ್ಲಿ ಇನ್ನೂ ನನ್ನ ಪತ್ನಿ ಲಕ್ಷ್ಮಿಯನ್ನ ನೋಡಲು ಬಿಟ್ಟಿಲ್ಲ. ನಾನು ಬೆಂಗಳೂರಿನಲ್ಲಿ ಆಟೋ ಓಡಿಸುವ ಕೆಲಸ ಮಾಡುತ್ತಿದ್ದೇನೆ. ನನ್ನ ಪತ್ನಿ ಮನೆಯಲ್ಲಿ ಕೆಲಸ ಮಾಡಿಕೊಂಡು ಇದ್ದಳು ಎಂದು ಹೇಳಿದ್ದಾರೆ.

Key words: Mysore palace, Balloon gas, blast, Condition, women, critical