Saturday, September 5, 2026

BDA Apartments

Home Crime ಅರಮನೆ ಬಳಿ ಹೀಲಿಯಂ ಸಿಲಿಂಡರ್ ಸ್ಪೋಟ ಪ್ರಕರಣ: ಇಂದು ಮೈಸೂರಿಗೆ NIA ತಂಡ

ಅರಮನೆ ಬಳಿ ಹೀಲಿಯಂ ಸಿಲಿಂಡರ್ ಸ್ಪೋಟ ಪ್ರಕರಣ: ಇಂದು ಮೈಸೂರಿಗೆ NIA ತಂಡ

ಮೈಸೂರು,ಡಿಸೆಂಬರ್,26,2025 (www.justkannada.in): ಮೈಸೂರು ಅರಮನೆಯ ಜಯಮಾರ್ತಾಂಡ ಬಳಿ ಸಂಭವಿಸಿದ ಹೀಲಿಯಂ ಸಿಲಿಂಡರ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು  ಎನ್ ಐಎ ತಂಡ ಮೈಸೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.

ಮೈಸೂರು ಅರಮನೆ ಬಳಿಯ ಘಟನಾ ಸ್ಥಳಕ್ಕೆ ಎನ್ ಐಎ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು  ಪ್ರಕರಣ ಸಂಬಂಧ ಸಂಪೂರ್ಣ ಮಾಹಿತಿ ಕಲೆ ಹಾಕಲಿದೆ.  ಈ ಮಧ್ಯೆ ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದು ಇದೀಗ ಎನ್ ಐಎ ಸಹ ಭೇಟಿ ನೀಡಿ ಪರಿಶೀಲಿಸಲಿದೆ.

ನಿನ್ನೆ ಮೈಸೂರಿನ ಅರಮನೆ ಜಯ ಮಾರ್ತಾಂಡ ಗೇಟ್ ಬಳಿ ಹೀಲಿಯಂ ಸಿಲಿಂಡರ್ ಸ್ಪೋಟಗೊಂಡು ಬಲೂನ್ ಮಾರುತ್ತಿದ್ದ ಸಲೀಂ  ಸಾವನ್ನಪ್ಪಿದ್ದು ಸ್ಪೋಟದಿಂದ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.

Key words: Helium cylinder, explosion, Mysore, palace, NIA team