Saturday, September 5, 2026

BDA Apartments

Home Front Page ಸಿಎಂ, ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್: ಬಿಜೆಪಿ, ಜೆಡಿಎಸ್ ಗೆ ಕುಟುಕಿದ ‘ಕೈ’ ಎಂಎಲ್ ಸಿ

ಸಿಎಂ, ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್: ಬಿಜೆಪಿ, ಜೆಡಿಎಸ್ ಗೆ ಕುಟುಕಿದ ‘ಕೈ’ ಎಂಎಲ್ ಸಿ

ನವದೆಹಲಿ,ನವೆಂಬರ್,29,2025 (www.justkannada.in):  ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು ಒಟ್ಟಿಗೆ ಬ್ರೇಕ್ ಫಾಸ್ಟ್ ಮಾಡಿದ್ದು ಬಿಜೆಪಿ ಮತ್ತು ಜೆಡಿಎಸ್ ಗೆ ಕಪಾಳಮೋಕ್ಷ ಮಾಡಿದಂತಾಗಿದೆ ಎಂದು ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್ ಕುಟುಕಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಎಂಎಲ್ ಸಿ ಸಲೀಂ ಅಹ್ಮದ್, ಕಾಂಗ್ರೆಸ್ ಪಕ್ಷದಲ್ಲಿಸಣ್ಣ ಪುಟ್ಟ ಭಿನ್ನಾಭಿಪ್ರಾಯ ಇರಬಹದು. ಆದರೆ ಕಾಂಗ್ರೆಸ್ ಪಕ್ಷ ಯಾವತ್ತೂ ಸಹ ಇಬ್ಬಾಗ ಆಗಲ್ಲ.  ಬಿಜೆಪಿಗರು ನಮ್ಮ ಮೇಲೆ ಟೀಕೆಗಳ ಸುರಿಮಳೆ ಸುರಿಸಿದರು.  ಅದಕ್ಕೆಲ್ಲಾ  ಇವತ್ತು ಉತ್ತರ ಸಿಕ್ಕಿದೆ.  ಇನ್ನೂ ಬೇಕಾದರೇ ಅಧಿವೇಶನದಲ್ಲಿ ಉತ್ತರ ಕೊಡುತ್ತೇವೆ  ಎಂದು ಟಾಂಗ್ ಕೊಟ್ಟರು.

ಬಿಜೆಪಿ ನಾಯಕರು ಮೊಸರಲ್ಲಿ ಕಲ್ಲು ಹುಡುಕಬೇಡಿ. ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಪರಿಷತ್ ಸಲೀಂ ಅಹ್ಮದ್ ನುಡಿದರು.

Key words: CM, DCM, breakfast, BJP, JDS, MLC, Salim Ahmed