Saturday, September 5, 2026

BDA Apartments

Home Front Page ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕೊಂಡೊಯ್ಯುತ್ತೇವೆ- ಡಿಸಿಎಂ ಡಿಕೆ ಶಿವಕುಮಾರ್

ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕೊಂಡೊಯ್ಯುತ್ತೇವೆ- ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ನವೆಂಬರ್,29,2025 (www.justkannada.in): ಮೆಕ್ಕೆಜೋಳ, ಕಬ್ಬು ಇತರೆ ವಿಚಾರಗಳ ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರದ ಬಳಿಗೆ ಸರ್ವಪಕ್ಷ ನಿಯೋಗ ಕೊಂಡೊಯ್ಯುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ರಾಜ್ಯದ ಹಲವು ವಿಚಾರಗಳಿವೆ. ಈ ಬಗ್ಗೆ ಚರ್ಚಿಸಲು ದೆಹಲಿಗೆ ಹೋಗುತ್ತೇನೆ.  ಕೇಂದ್ರ ಸಚಿವರ ಭೇಟಿ ಮಾಡುತ್ತೇನೆ ಸರ್ವಪಕ್ಷ ಸಭೆ ಕರೆಯಬೇಕು ಅಂತಾನೂ ಇದ್ದೇವೆ.  ಅದರ ಬಗ್ಗೆನೂ ನಾನು ಸಿಎಂ ಚರ್ಚೆ ಮಾಡಿದ್ದೇವೆ.  ಸರ್ವ ಪಕ್ಷ ನಿಯೋಗ ಕೊಂಡೊಯುವ ಬಗ್ಗೆ ಚರ್ಚೆ ಆಗಿದೆ. ಮೆಕ್ಕೆಜೋಳ ಕಬ್ಬಯ ಇತರೆ ವಿಚಾರಕ್ಕೆ ಸರ್ವಪಕ್ಷ ನಿಯೋಗ ಹೋಗುತ್ತೇವೆ ಎಂದರು.

ಇಂದು ಬೆಳಿಗ್ಗೆ ಸಿಎಂ ಸಿದ್ದರಾಮಯ್ಯ ಜೊತೆ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿದ್ದ ಡಿಸಿಎಂ ಡಿಕೆ ಶಿವಕುಮಾರ್ ಆ ನಂತರ ಜಂಟಿ ಸುದ್ದಿಗೋಷ್ಠಿ ನಡೆಸಿ ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂಬ ಸಂದೇಶ ರವಾನಿಸಿದರು.

Key words: all-party delegation, Central government,  DCM, DK Shivakumar