Saturday, September 5, 2026

BDA Apartments

Home Crime ಅಮಾನವೀಯ ಘಟನೆ : ತಾಯಿಗೆ ಚಪ್ಪಲಿಯಿಂದ ಹಲ್ಲೆ ಮಾಡಿದ ಮಗಳು

ಅಮಾನವೀಯ ಘಟನೆ : ತಾಯಿಗೆ ಚಪ್ಪಲಿಯಿಂದ ಹಲ್ಲೆ ಮಾಡಿದ ಮಗಳು

ಮಂಗಳೂರು.ನವೆಂಬರ್,29,2025 (www.justkannada.in):  ತಾಯಿಯ ಮೇಲೆ ಮಗಳೇ ಚಪ್ಪಲಿಯಿಂದ ಹಲ್ಲೆ ಮಾಡಿರುವ ಅಮಾನವೀಯ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರಿನ ಕಾವೂರು ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಗಳು ತಾಯಿಯನ್ನು ತಳ್ಳಿ ನೆಲಕ್ಕುರುಳಿಸಿ  ಹಲ್ಲೆ ಮಾಡಿ ಚಪ್ಪಲಿಯಿಂದ ಹೊಡೆದಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ತಾಯಿ ನಿರ್ಮಲ ಮೇಲೆ ಮಗಳು ನೇತ್ರಾವತಿ ಹಲ್ಲೆ ಮಾಡಿರುವುದು ಎನ್ನಲಾಗಿದ್ದು, ಇವರು ಉತ್ತರ ಕರ್ನಾಟಕದ ಮೂಲದವರು ಎಂದು ತಿಳಿದುಬಂದಿದೆ.

ನೀನು ಮಗಳೇ ಅಲ್ಲ ಎಂದು ಮಗಳಿಗೆ ತಾಯಿ ಹೇಳುತ್ತಿದ್ದ ಆರೋಪ ಕೇಳಿಬಂದಿದೆ. ಮಗಳ ಮೇಲೆ ದೂರು ಹೊತ್ತು ಪೊಲೀಸ್ ಠಾಣೆಗೆ ಪಂಚಾಯತ್ ಗೆ ತಾಯಿ ಬರುತ್ತಿದ್ದರು. ಗ್ರಾಮ ಪಂಚಾಯತಿ ಹೋಗಿ ಈಕೆ ನನ್ನ ಮಗಳಲ್ಲ ವಂಶವೃಕ್ಷದಲ್ಲಿ ಆಕೆ ಹೆಸರನ್ನು ತೆಗೆಸಿ ಎಂದು ತಾಯಿ ದೂರು ನೀಡುತ್ತಿದ್ದರಂತೆ ಎಂಬ ಆರೋಪ ಕೇಳಿ ಬಂದಿದೆ.

ಇದರಿಂದ ಕೋಪಗೊಂಡ ಮಗಳು ನೇತ್ರಾವತಿ ತಾಯಿಯ ಮೇಲೆ ಹಲ್ಲೆ ಮಾಡಿ ಚಪ್ಪಲಿಯಿಂದ ಥಳಿಸಿದ್ದಾರೆ ಎನ್ನಲಾಗಿದೆ.

Key words: Daughter, Assault, slippers, mother,