Saturday, September 5, 2026

BDA Apartments

Home Front Page ಮಣಿಪಾಲ್ ಆಸ್ಪತ್ರೆಯಿಂದ ನಿವಾಸಕ್ಕೆ ವಾಪಸ್ ಆದ ಸಿಎಂ ಸಿದ್ದರಾಮಯ್ಯ

ಮಣಿಪಾಲ್ ಆಸ್ಪತ್ರೆಯಿಂದ ನಿವಾಸಕ್ಕೆ ವಾಪಸ್ ಆದ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ನವೆಂಬರ್,29,2025 (www.justkannada.in): ಇಂದು ಬೆಳಿಗ್ಗೆ ಬೆಂಗಳೂರಿನ ಸಿಎಂ ನಿವಾಸ ಕಾವೇರಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಜೊತೆಗೆ ಬ್ರೇಕ್ ಫಾಸ್ಟ್ ನಡೆಸಿದ ಬಳಿಕ ಮಣಿಪಾಲ್ ಆಸ್ಪತ್ರೆಗೆ ತೆರಳಿದ್ದ  ಸಿಎಂ ಸಿದ್ದರಾಮಯ್ಯ ಇದೀಗ ಆಸ್ಪತ್ರೆಯಿಂದ ನಿವಾಸಕ್ಕೆ ವಾಪಸ್ ಆಗಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್ ಜೊತೆ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿದ ಬಳಿಕ ಸಿಎಂ ಸಿದ್ದರಾಮಯ್ಯ ಆರೋಗ್ಯ ತಪಾಸಣೆಗಾಗಿ ಮಣಿಪಾಲ್ ಆಸ್ಪತ್ರೆಗೆ ತೆರಳಿದ್ದರು. ಸತತ 3 ಗಂಟೆಗಳ ಕಾಲ ತಪಾಸಣೆಗೊಳಪಟ್ಟ ಸಿಎಂ ಸಿದ್ದರಾಮಯ್ಯ  ಚಿಕಿತ್ಸೆ ಪಡೆದ ಬಳಿಕ ಇದೀಗ ಮತ್ತೆ ಕಾವೇರಿ ನಿವಾಸಕ್ಕೆ ತೆರಳಿದ್ದಾರೆ.

ಕಾವೇರಿ ನಿವಾಸದಲ್ಲ ಜನರ ಅಹವಾಲು ಸ್ವೀಕರಿಸಿ ನಂತರ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ.  ಇಂದು ಯಾವುದೇ ಕಾರ್ಯಕ್ರಮವನ್ನ ನಿಗದಿ ಪಡಿಸಿಲ್ಲ.

Key words: CM Siddaramaiah, returns ,residence , Manipal Hospital