Sunday, September 6, 2026

BDA Apartments

Home Front Page ಮೀಟಿಂಗ್ ನಲ್ಲಿ ಗೊಂದಲ ಬಗೆಹರಿದ್ರೆ ಒಳ್ಳೆಯದು ಅಲ್ವಾ?  ಬ್ರೇಕ್ ಫಾಸ್ಟ್ ಮೀಟಿಂಗ್ ಕುರಿತು ಸಚಿವ ಪರಂಮೇಶ್ವರ್...

ಮೀಟಿಂಗ್ ನಲ್ಲಿ ಗೊಂದಲ ಬಗೆಹರಿದ್ರೆ ಒಳ್ಳೆಯದು ಅಲ್ವಾ?  ಬ್ರೇಕ್ ಫಾಸ್ಟ್ ಮೀಟಿಂಗ್ ಕುರಿತು ಸಚಿವ ಪರಂಮೇಶ್ವರ್ ಪ್ರತಿಕ್ರಿಯೆ

ಬೆಂಗಳೂರು,ನವೆಂಬರ್,29,2025 (www.justkannada.in) :  ಅಧಿಕಾರ ಹಂಚಿಕೆ ನಾಯಕತ್ವ ಬದಲಾವಣೆ ಗೊಂದಲ ಚರ್ಚೆ ನಡುವೆ ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಒಟ್ಟಿಗೆ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿದ್ದು ಈ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಮೀಟಿಂಗ್ ನಲ್ಲಿ ಗೊಂದಲ ಬಗೆಹರಿದರೆ ಒಳ್ಳೆಯದು ಅಲ್ವಾ? ಎಂದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಗೊಂದಲಗಳು ಇರಬಾರದು ಅಂತಾ ಎಲ್ಲರಿಗೂ ಇಚ್ಛೆ ಇದೆ. ಹೈಕಮಾಂಡ್ ಸಹ ಗೊದಲ ಇರಬಾರದು ಅಂತಾ ಹೇಳುತ್ತೆ. ಇಬ್ಬರಲ್ಲೂ ಗೊಂದಲ ಇದ್ದರೆ ಬಗೆಹರಿಸಿಕೊಳ್ಳಲು ತಿಳಿಸಿದ್ದಾರೆ. ಗೊಂದಲಗಳಿಗೆ ತೆರೆ ಬಿದ್ದರೆ ಒಳ್ಳೆಯದು ಅಲ್ವಾ? ಎಂದರು.

ದೆಹಲಿಗೆ ಹೋಗುವ ಅವಶ್ಯಕತೆ ಇದ್ದರೆ ನಾನು ಹೋಗುತ್ತೇನೆ ಸದ್ಯಕ್ಕೆ ನನ್ನ ನೇತೃತ್ವದಲ್ಲಿ ದೆಹಲಿಗೆ ಹೋಗಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಸ್ಪಷ್ಟಪಡಿಸಿದರು.

Key words: confusion, resolve, meeting, Minister, Parameshwar, breakfast meeting