Sunday, August 16, 2026

BDA Apartments

Home Cinema ತೆಲಗಿನಲ್ಲೂ ಬರಲಿದೆ ಧ್ರುವ ಸರ್ಜಾ ‘ಪೊಗರು’ !

ತೆಲಗಿನಲ್ಲೂ ಬರಲಿದೆ ಧ್ರುವ ಸರ್ಜಾ ‘ಪೊಗರು’ !

ಬೆಂಗಳೂರು, ಅಕ್ಟೋಬರ್ 18, 2019 (www.justkannada.in): ನಂದ ಕಿಶೋರ್ ನಿರ್ದೇಶನದ ಆಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ʼಪೊಗರುʼ ಚಿತ್ರ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬರುತ್ತಿದೆ.

ಟಾಲಿವುಡ್ ಅಭಿಮಾನಿಗಳು ಮಾಸ್ ಚಿತ್ರವನ್ನು ಹೆಚ್ಚು ಇಷ್ಟಪಡುವುದರಿಂದ ತೆಲುಗಿನಲ್ಲೂ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.

ಪೊಗರು ಚಿತ್ರದ ವಿಶೇಷ ಡೈಲಾಗ್ ಗಳ ಟ್ರೈಲರ್ ಅನ್ನು ಅಕ್ಟೋಬರ್ 24ರಂದು ಬಿಡುಗಡೆ ಮಾಡಲಾಗುತ್ತದೆ. ಡಿಸೆಂಬರ್‌ನಲ್ಲಿ ಸಿನಿಮಾ ಬಿಡುಗಡೆ ಮಾಡಬೇಕೆಂದು ಚಿತ್ರತಂಡ ಪ್ಲಾನ್‌ ಮಾಡಿಕೊಂಡಿದೆ.