ಟೀಂ ಇಂಡಿಯಾ ಪ್ರವಾಸ: ಬಾಂಗ್ಲಾ ಕ್ರಿಕೆಟ್ ತಂಡ ಪ್ರಕಟ

ಬೆಂಗಳೂರು, ಅಕ್ಟೋಬರ್ 18, 2019 (www.justkannada.in): ಬಾಂಗ್ಲಾದೇಶ ಕ್ರಿಕೆಟ್ ಟಿ-20 ಸರಣಿಗೆ 15 ಮಂದಿ ಆಟಗಾರರ ತಂಡವನ್ನು ಪ್ರಕಟ ಮಾಡಿದೆ.

ಬಾಂಗ್ಲಾದೇಶ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು ಟೀಂ ಇಂಡಿಯಾ ವಿರುದ್ಧ ಸೆಣೆಸಾಡಲಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಬಾಂಗ್ಲಾಕ್ಕೆ ಈ ಸರಣಿ ಮುಖ್ಯವಾಗಿದೆ.

ಹೀಗಾಗಿ ಅನುಭವಿ ಆಟಗಾರ ಶಕಿಬ್ ಅಲ್ ಹಸನ್ ಸಾರಥ್ಯದಲ್ಲಿ ಮುನ್ನಡೆಯುತ್ತಿದೆ. ಅಲ್ಲದೆ 2017 ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ತನ್ನ ಗೆಳತಿಯೊಂದಿಗೆ ಅಶ್ಲೀಲ ಫೋಟೋ ಹಂಚಿಕೊಂಡಿದ್ದಕ್ಕಾಗಿ ಎರಡು ತಿಂಗಳು ಜೈಲು ಪಾಲಾಗಿದ್ದ ಅರಾಫತ್ ಸನ್ನಿಗೆ ಅವಕಾಶ ನೀಡಿರುವುದು ವಿಶೇಷ.