Sunday, September 13, 2026

BDA Apartments

JK EXCLUSIVE: ಐಪಿಎಲ್‌ ಫೈನಲ್ಸ್‌ ಗೂ ಮುನ್ನವೇ RCB ರಿಸಲ್ಟ್‌ ಫಿಕ್ಸ್‌ ಆಗಿತ್ತಾ..? BDA JK_Adv ...
Home Crime JK EXCLUSIVE: ಐಪಿಎಲ್‌ ಫೈನಲ್ಸ್‌ ಗೂ ಮುನ್ನವೇ RCB ರಿಸಲ್ಟ್‌ ಫಿಕ್ಸ್‌ ಆಗಿತ್ತಾ..?

JK EXCLUSIVE: ಐಪಿಎಲ್‌ ಫೈನಲ್ಸ್‌ ಗೂ ಮುನ್ನವೇ RCB ರಿಸಲ್ಟ್‌ ಫಿಕ್ಸ್‌ ಆಗಿತ್ತಾ..?

Even before the IPL final match began, was the 'Royal Challengers Bangalore', also known as RCB, already victorious? Such a doubt is present in the FIR registered by the police at Cubbon Park in Bengaluru..?

 

ಮೈಸೂರು, ಜೂ.೦೬,೨೦೨೫: ಐಪಿಎಲ್‌ ಫೈನಲ್ದ್‌  ಪಂದ್ಯ ಆರಂಭಕ್ಕೂ ಮುನ್ನವೇ “ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು” ಯಾನೆ ಆರ್ಸಿಬಿ ತಂಡ ವಿಜಯಿಯಾಗಿತ್ತಾ..?. ಇಂಥದ್ದೊಂದು ಅನುಮಾನ ಬೆಂಗಳೂರಿನ ಕಬ್ಬನ್‌ ಪಾರ್ಕ್‌ ಪೊಲೀಸರ ಎಫ್.ಐ.ಆರ್.‌ ನಲ್ಲಿದೆ..?

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿಜಯೋತ್ಸವ ಸಮಾರಂಭದ ವೇಳೆ ಕಾಲ್ತುಳಿತದಿಂದ ೧೧ ಮಂದಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಎಫ್. ಐ. ಆರ್ ದಾಖಲಾಗಿದೆ. ಅದು ಹೈಕೋರ್ಟ್‌ ಸ್ವಯಂಪ್ರೇರಿತ ದೂರು ದಾಖಲಿಸಿ ವಿಚಾರಣೆ ನಡೆಸಿ ರಾಜ್ಯ ಸರಕಾರಕ್ಕೆ ಕ್ರಮಕ್ಕೆ ಸೂಚಿಸಿದ ಬಳಿಕ.

JK EXCLUSIVE rcb1 rcb1 1

ಈ ಎಫ್. ಐ. ಆರ್‌ ನಲ್ಲಿನ ಮಾಹಿತಿ ಪ್ರಕಾರ, ಜೂ. ೩ ರಂದು ಸಂಜೆ ೬ ಗಂಟೆಗೆ ಕೆ.ಎಸ್.ಸಿ.ಎ ನ ಚೀಫ್‌ ಎಕ್ಸಿಕ್ಯೂಟೀವ್‌ ಆಫೀಸರ್‌ ಶುಭೇಂದು ಘೋಷ್‌ , ಜೂ. ೪ ರಂದು ಆರ್ಸಿಬಿ ತಂಡದ ವಿಜಯೋತ್ಸವ ಕಾರ್ಯಕ್ರಮವನ್ನು ಸಂಜೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಚರಿಸುವ ಬಗ್ಗೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸುವಂತೆ ಕೋರಿ ಕಬ್ಬನ್‌ ಪಾರ್ಕ್‌ ಪೊಲೀಸರಿಗೆ ಮನವಿ ಪತ್ರ ಸಲ್ಲಿಸಿದರು… ಎಂದು ಉಲ್ಲೇಖಿಸಲಾಗಿದೆ.

ವಿಪರ್ಯಾಸವೆಂದರೆ, ಕೆ.ಎಸ್.ಸಿ.ಎ ನ ಚೀಫ್‌ ಎಕ್ಸಿಕ್ಯೂಟೀವ್‌ ಆಫೀಸರ್‌ ಶುಭೇಂದು ಘೋಷ್‌ ಅರ್ಜಿ ಸಲ್ಲಿಸುವ ಸಮಯದಲ್ಲಿ ಇನ್ನು ಐಪಿಎಲ್‌ ಪಂದ್ಯವೇ ಶುರುವಾಗಿರಲಿಲ್ಲ. ಅಂದ ಮೇಲೆ ಫೈನಲ್ಸ್‌ ಪಂದ್ಯಕ್ಕೂ ಮುನ್ನವೇ ಆರ್ಸಿಬಿ ಗೆಲ್ಲಲಿದೆ ಎಂಬುದು ಈ ಅಧಿಕಾರಿಗೆ ತಿಳಿದಿದ್ದಾರೂ ಹೇಗೆ..? ಎಂಬುದು ಯಕ್ಷ ಪ್ರಶ್ನೆ.

ವಾಸ್ತವವಾಗಿ ಫೈನಲ್ಸ್‌ ಪಂದ್ಯ ಸಂಜೆ ೭ ರ ಸುಮಾರಿಗೆ ಆರಂಭಗೊಂಡು ತಡ ರಾತ್ರಿ ೧೧.೩೦ ರ ವೇಳೆಗೆ ಮುಕ್ತಾಯವಾಗಿತು. ಅಂದ ಮೇಲೆ  ಫೈನಲ್ಸ್‌ ಪಂದ್ಯದ ರಿಸಲ್ಟ್‌ ಕೆ.ಎಸ್.ಸಿ.ಎ ಗೆ ಈ ಮೊದಲೇ ಹೇಗೆ ಗೊತ್ತಾಯಿತು..? ಹಾಗಿದ್ರೆ ಪಂದ್ಯಕ್ಕೂ ಮುನ್ನವೇ ಫಲಿತಾಂಶ ಫಿಕ್ಸ್‌ ಆಗಿತ್ತಾ..?

ಸಂಬಂಧಪಟ್ಟವರೇ ಸ್ಪಷ್ಟನೆ ನೀಡಬೇಕಾಗಿದೆ.

key words: IPL final match, ‘Royal Challengers Bangalore’, RCB, FIR, Cubbon Park police , Bengaluru

vtu

SUMMARY: 

ipl final match rcb-final-fir rcb final fir

Even before the IPL final match began, was the ‘Royal Challengers Bangalore’, also known as RCB, already victorious? Such a doubt is present in the FIR registered by the police at Cubbon Park in Bengaluru.