Saturday, October 17, 2026

Dasara Wishes

Happy Dasara
Home Front Page ಪ್ರಧಾನಿ ಮೋದಿ ಭೇಟಿ ಅಗತ್ಯವಿಲ್ಲ: ಶೀಘ್ರದಲ್ಲೇ ಪರಿಹಾರ ಬಿಡುಗಡೆ- ಸಿಎಂ ಬಿಎಸ್ ಯಡಿಯೂರಪ್ಪ ವಿಶ್ವಾಸ…

ಪ್ರಧಾನಿ ಮೋದಿ ಭೇಟಿ ಅಗತ್ಯವಿಲ್ಲ: ಶೀಘ್ರದಲ್ಲೇ ಪರಿಹಾರ ಬಿಡುಗಡೆ- ಸಿಎಂ ಬಿಎಸ್ ಯಡಿಯೂರಪ್ಪ ವಿಶ್ವಾಸ…

ಬೆಂಗಳೂರು,ಅ,3,2019(www.justkannada.in): ಪ್ರವಾಹ ಪೀಡಿತ ಪ್ರದೇಶಗಳಿಗೆ ಪ್ರಧಾನಿ ಮೋದಿ ಭೇಟಿ ನೀಡುವ ಅಗತ್ಯವಿಲ್ಲ. ಕೇಂದ್ರ ಸರ್ಕಾರ ಶೀಘ್ರವೇ ಪರಿಹಾರ ಬಿಡುಗಡೆ ಮಾಡಲಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಇಂದು ನೆರೆ ಪರಿಹಾರ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಎಂ ಬಿಎಸ್ ಯಡಿಯೂರಪ್ಪ,  ಕೇಂದ್ರ ಸರ್ಕಾರದ ಪರಿಹಾರಕ್ಕಾಗಿ ಕಾಯುತ್ತಿಲ್ಲ. ನೆರೆ ಸಂತ್ರಸ್ತರಿಗೆ ಈಗಾಗಲೇ 25 ಸಾವಿರ ನೀಡಲಾಗಿದೆ. ಯಾವುದೇ ಅತಿವೃಷ್ಠಿ ಭಾಗದ ಕೆಲಸ ನಿಂತಿಲ್ಲ. ರಾಜ್ಯ ಸರ್ಕಾರ ಪರಿಹಾರದ ಕಾರ್ಯವನ್ನ ನಡೆಸುತ್ತಿದೆ ಎಂದು ಸ್ಪಷ್ಟನೆ ನೀಡಿದರು.

ಪ್ರಧಾನಿ ಮೋದಿ  ವಿದೇಶಕ್ಕೆ ಹೋಗಿದ್ರು ವಾಪಸ್ ಬಂದಿದ್ದಾರೆ. ಮೋದಿ ಅಮಿತ್ ಶಾ ಅವರಿಗೆ ಎಲ್ಲಾ ಗೊತ್ತಿದೆ.  ಪರಿಹಾರದ ಬಗ್ಗೆ ಸಭೆ ನಡೆಸಿ ಕೇಂದ್ರ ತಕ್ಷಣ ಪರಿಹಾರ ಬಿಡುಗಡೆ ಮಾಡಲಿದೆ. ಕಾಂಗ್ರೆಸ್ ಜೆಡಿಎಸ್ ನಾಯಕರು ದೊಡ್ಡದಾಗಿ ಉಪಕಾರ ಮಾಡಿದಂತೆ ಬೊಬ್ಬೆ ಹೊಡೆಯುತ್ತಿದ್ದಾರೆ ಅನಗತ್ಯವಾಗಿ ಪ್ರಧಾನಿ ಮೋದಿ ಅವರನ್ನ ಟೀಕಿಸುವುದನ್ನ ಬಿಡಲಿ  ಎಂದು ಸಿಎಂ ಬಿಎಸ್ ಯಡಿಯೂರಪ್ಪ  ತಿರುಗೇಟು ನೀಡಿದರು.

Key words: flood relief-PM- narendra Modi-CM bs yeddyurappa- bangalore