Sunday, September 20, 2026

BDA Apartments

ಸಂಕಷ್ಟದಲ್ಲಿ ನಗರ ಪಾಲಿಕೆ : ಕೇಂದ್ರದ ಅನುದಾನಕ್ಕೆ ಕೊಕ್..!‌ BDA JK_Adv BDA Adv
Home Front Page ಸಂಕಷ್ಟದಲ್ಲಿ ನಗರ ಪಾಲಿಕೆ : ಕೇಂದ್ರದ ಅನುದಾನಕ್ಕೆ ಕೊಕ್..!‌

ಸಂಕಷ್ಟದಲ್ಲಿ ನಗರ ಪಾಲಿಕೆ : ಕೇಂದ್ರದ ಅನುದಾನಕ್ಕೆ ಕೊಕ್..!‌

Municipal Corporation in crisis: Centre's funds suspended. In the absence of an elected council in the municipal corporation, funds worth crores of rupees due from the Centre have been stopped. This has adversely affected many developments works within the municipal limits.

 

ಮೈಸೂರು, ಫೆ.೦೬,೨೦೨೫ :   ನಗರ ಪಾಲಿಕೆಯಲ್ಲಿ ಚುನಾಯಿತ ಕೌನ್ಸಿಲ್ ಇಲ್ಲದಿರುವ ಕಾರಣ, ಕೇಂದ್ರದಿಂದ ಬರಬೇಕಾಗಿದ್ದ ಕೋಟ್ಯಾಂತರ ರೂ.ಗಳ ಅನುದಾನಕ್ಕೆ ಕೊಕ್. ಇದು‌ ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಅನೇಕ ಅಭಿವೃದ್ಧಿ ಕಾಮಗಾರಿಗಳ ಮೇಲೆ ದುಷ್ಪರಿಣಾಮ ಬೀರಿದೆ.

ಮಹಾನಗರ ಪಾಲಿಕೆಯಿಂದ 15 ನೇ ಹಣಕಾಸು ಅನುದಾನಕ್ಕೆ ಆಯೋಗದ ಸಂಬಂಧಿಸಿದಂತೆ ಯಾವುದೇ ಕಾಮಗಾರಿಗಳನ್ನು ಅನುದಾನ ಬಿಡುಗಡೆ ಆಗುವವರೆಗೂ ಕೈಗೊಳ್ಳಬಾರದು ಎಂದು ಪೌರಾಡಳಿತ ನಿರ್ದೇಶನಾಲಯ ನಿರ್ದೇಶನ ನೀಡಿದೆ.

ಸಂಕಷ್ಟದಲ್ಲಿ ನಗರ ಪಾಲಿಕೆ nypunya1

‘ಮೈಸೂರು, ತುಮಕೂರು ಹಾಗೂ ಶಿವಮೊಗ್ಗ ಸೇರಿದಂತೆ ರಾಜ್ಯದ 43 ನಗರ ಸ್ಥಳೀಯ ಸಂಸ್ಥೆಗಳಲ್ಲಿ  ಚುನಾಯಿತ ಸದಸ್ಯರು ಇಲ್ಲ. ಪರಿಣಾಮ 2024-25ನೇ ಸಾಲಿನಲ್ಲಿ 15ನೇ ಹಣಕಾಸು ಆಯೋಗದ ಅನುದಾನ ಪಡೆಯಲು ಮಾರ್ಗಸೂಚಿಯ ಅನ್ವಯ ಅನರ್ಹ.  ಆದ್ದರಿಂದ ಈ 43 ನಗರ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ಬಿಡುಗಡೆಯಾಗೋದು ಡೌಟು. ಆದ್ದರಿಂದ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಕಾಮಗಾರಿಗಳನ್ನು ಅನುದಾನ ಬಿಡುಗಡೆ ಆಗುವರೆಗೂ ಕೈಗೊಳ್ಳದಂತೆ ಸೂಚಿಸಲಾಗಿದೆ.

ಸರ್ಕಾರದ ಕಾರ್ಯದರ್ಶಿಗಳ  ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಯೋಜನಾ ನಿರ್ದೇಶಕರ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದೆ.

ಕೇಂದ್ರದ ಅನುದಾನಕ್ಕೆ ಕೊಕ್..!‌ TOP-BANNER-01 TOP BANNER 01

ಇವಕ್ಕೂ ಅನ್ವಯ:

ಚುನಾವಣೆ ನಡೆದಿಲ್ಲದಿರುವ ಬೋಗಾದಿ, ಕಡಕೊಳ, ರಮ್ಮನಹಳ್ಳಿ ಮತ್ತು ಶ್ರೀರಾಂಪುರ ಪಟ್ಟಣ ಪಂಚಾಯಿತಿ ಮತ್ತು ಹೂಟಗಳ್ಳಿ ನಗರಸಭೆಗೂ ಇದು ಅನ್ವಯವಾಗಲಿದೆ.

ಸರಕಾರದ ನಿರ್ಲಕ್ಷ್ಯದಿಂದಲೇ ತೊಡಕು:

ಸಂಕಷ್ಟದಲ್ಲಿ ನಗರ ಪಾಲಿಕೆ : ಕೇಂದ್ರದ ಅನುದಾನಕ್ಕೆ ಕೊಕ್..!‌ mcc

‘15ನೇ ಹಣಕಾಸು ಆಯೋಗದ ಅನುದಾನ ಸರಾಸರಿ ₹60 ಕೋಟಿಗೂ ಅಧಿಕ ಮೊತ್ತ ಬಿಡುಗಡೆಯಾಗುತ್ತಿತ್ತು. ಇದನ್ನು ಬಳಸಿಕೊಂಡು ನಗರದ  ಒಳಚರಂಡಿ, ಕುಡಿಯುವ ನೀರು, ರಸ್ತೆ ಅಭಿವೃದ್ಧಿ, ಉದ್ಯಾನಗಳು ಹಾಗೂ ಬೀದಿದೀಪಗಳ ನಿರ್ವಹಣೆ ಮೊದಲಾದ ಕೆಲಸಗಳನ್ನು ಕೈಗೊಳ್ಳಲಾಗುತ್ತಿತ್ತು.

ಒಂದೆಡೆ ಜನಪ್ರತಿನಿಧಿಗಳಿಲ್ಲ,  ಇನ್ನೊಂದೆಡೆ ಕೇಂದ್ರದ ಅನುದಾನ ದೊರೆಯದಂತಹ ಸ್ಥಿತಿ ಎದುರಾಗಿದೆ. ಇದು, ಸೌಲಭ್ಯಗಳನ್ನು ಕಲ್ಪಿಸುವುದಕ್ಕೆ ತೊಡಕಾಗಿ ಪರಿಣಮಿಸಲಿದೆ’ ಎಂದು ಮಾಜಿ ಮೇಯರ್‌ ಶಿವಕುಮಾರ್ ಆರೋಪಿಸುತ್ತಾರೆ .

65 ವಾರ್ಡ್‌ಗಳನ್ನು ಹೊಂದಿರುವ ಮೈಸೂರು ಮಹಾನಗರಪಾಲಿಕೆಯ ಚುನಾಯಿತ ಆಡಳಿತ ಮಂಡಳಿಯ ಅಧಿಕಾರದ ಅವಧಿ 2023 ನ.16ರಂದು ಕೊನೆಗೊಂಡಿದೆ. ಅಲ್ಲಿಂದ ಈವರೆಗೂ ಚುನಾವಣೆ ನಡೆದಿಲ್ಲ.

key words: Municipal Corporation, crisis, Centre’s funds suspended, MCC, mysore

SUMMARY:

municipal corporation mcc

Municipal Corporation in crisis: Centre’s funds suspended. In the absence of an elected council in the municipal corporation, funds worth crores of rupees due from the Centre have been stopped. This has adversely affected many developments works within the municipal limits.

15ನ ಹಣಕ VTU TOP BANNER 04