Saturday, August 1, 2026

BDA Apartments

Home Front Page ನಾಳೆ ಸಕಲ ಸರ್ಕಾರಿ ಗೌರವಗಳೊಂದಿಗೆ ‘ಡಾ. ಮನಮೋಹನ್ ಸಿಂಗ್’ ಅಂತ್ಯಕ್ರಿಯೆ

ನಾಳೆ ಸಕಲ ಸರ್ಕಾರಿ ಗೌರವಗಳೊಂದಿಗೆ ‘ಡಾ. ಮನಮೋಹನ್ ಸಿಂಗ್’ ಅಂತ್ಯಕ್ರಿಯೆ

ನವದೆಹಲಿ,ಡಿಸೆಂಬರ್,27,2024 (www.justkannada.in):  ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ನಿನ್ನೆ ರಾತ್ರಿ ಉಸಿರಾಟದ ತೊಂದರೆಯಿಂದ ನಿಧನರಾಗಿದ್ದು, ನಾಳೆ ದೆಹಲಿಯ ರಾಜ್ ಘಾಟ್ ಬಳಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.

ಇಂದು ಮೋತಿಲಾಲ್ ನೆಹರು ಮಾರ್ಗದಲ್ಲಿರುವ ನಿವಾಸದಲ್ಲಿ ಮನಮೋಹನ್ ಸಿಂಗ್ ಅವರ ಪಾರ್ಥೀವ ಶರೀರವನ್ನ ಅಂತಿಮದರ್ಶನಕ್ಕೆ ಇಡಲಾಗಿದೆ. ನಾಳೆ ಬೆಳಿಗ್ಗೆ 8 ಗಂಟೆಯಿಂದ 10ವರೆಗೆ ಎಐಸಿಸಿ ಕಚೇರಿಯಲ್ಲಿ ಪಾರ್ಥೀವ ಶರೀರವನ್ನ ಅಂತಿಮದರ್ಶನಕ್ಕೆ ಇಡಲಾಗುತ್ತದೆ. ರಾಜಕೀಯ ನಾಯಕರು ಅಂತಿಮ ನಮನ ಸಲ್ಲಿಸಲಿದ್ದಾರೆ. ಬಳಿಕ  ಎಐಸಿಸಿ ಕಚೇರಿಯಿಂದಲೇ  ಮನಮೋಹನ್ ಸಿಂಗ್ ಅವರ ಅಂತಿಮಯಾತ್ರೆ ಆರಂಭವಾಗಲಿದ್ದು ರಾಜಘಾಟ್ ನಲ್ಲಿ ಸಕಲ  ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.

ಅಲ್ಲದೆ, ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ಸರ್ಕಾರ 7 ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ. ಮತ್ತೊಂದೆಡೆ, ಕಾಂಗ್ರೆಸ್ ಕೂಡ ಇಂದು ತನ್ನ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ.

Key words: Former PM, Dr. Manmohan Singh, funeral