Friday, August 7, 2026

BDA Apartments

Home Front Page ಹೆಜ್ಜಾಲದಿಂದ ಚಾಮರಾಜನಗರಕ್ಕೆ ರೈಲು ಮಾರ್ಗ ಕಲ್ಪಿಸಲು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ ಸಂಸದ ಸುನಿಲ್ ಬೋಸ್

ಹೆಜ್ಜಾಲದಿಂದ ಚಾಮರಾಜನಗರಕ್ಕೆ ರೈಲು ಮಾರ್ಗ ಕಲ್ಪಿಸಲು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ ಸಂಸದ ಸುನಿಲ್ ಬೋಸ್

ಬೆಂಗಳೂರು,ಡಿಸೆಂಬರ್,18,2024 (www.justkannada.in):  ಇಂದು ಚಾಮರಾಜನಗರ ಕ್ಷೇತ್ರದ ಸಂಸದರಾದ ಸುನಿಲ್ ಬೋಸ್ ಅವರು ಹೆಜ್ಜಾಲ – ಚಾಮರಾಜನಗರ ಮಾರ್ಗದ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಕೋರಿ ಕೇಂದ್ರ ರೈಲ್ವೇ ರಾಜ್ಯ ಸಚಿವರಾದ ಶ್ರೀ ವಿ ಸೋಮಣ್ಣ ಅವರಿಗೆ ಇಂದು ವಿನಂತಿಯನ್ನು ಸಲ್ಲಿಸಿದರು.

ಈ ಹಿಂದೆ ಬೆಂಗಳೂರಿನಿಂದ ಸತ್ಯಮಂಗಲದ ವರೆಗೆ (ಒಟ್ಟು 260 ಕಿಮೀ) ಪ್ರಸ್ತಾಪಗೊಂಡಿದ್ದ ಈ ಮಾರ್ಗವು ಮುಂದೆ ತಮಿಳುನಾಡು ಸರ್ಕಾರವು ಸತ್ಯ ಮಂಗಲ ಪ್ರದೇಶದಲ್ಲಿ ಸರ್ವೇ ಮಾಡಲು ಅವಕಾಶ ನೀಡದ ಕಾರಣ 2013-14 ರಲ್ಲಿ ಕೆಂಗೇರಿಯಿಂದ ಚಾಮರಾಜನಗರಕ್ಕೆ ರೈಲು ಮಾರ್ಗವನ್ನು ಗುರುತಿಸಲಾಯಿತು.

ಆದರೆ ಈ ಸರ್ವೇ ಮಾರ್ಗದಲ್ಲಿ ಅರಣ್ಯ ಪ್ರದೇಶ ಬಂದ ಕಾರಣ ಇದೀಗ ಸರ್ವೇ ಮಾರ್ಗವನ್ನು ಹೆಜ್ಜಾಲದಿಂದ ಗುರುತಿಸಲಾಗಿದ್ದು ಇದು ಕನಕಪುರ – ಮಳವಳ್ಳಿ – ಯಳಂದೂರು ಮಾರ್ಗವಾಗಿ ಚಾಮರಾಜನಗರ ತಲುಪಲಿದೆ.

ಇದೊಂದು ಬಹು ನಿರೀಕ್ಷಿತ ಯೋಜನೆ ಆಗಿದ್ದು ಇದರಿಂದ ಬಹಳಷ್ಟು ಜನರಿಗೆ ಅನುಕೂಲ ಆಗಲಿದೆ ಎಂದು ಮಾನ್ಯ ಸಂಸದರು ತಿಳಿಸಿದ್ದಾರೆ.