Tuesday, August 4, 2026

BDA Apartments

Home Crime ಮೈಕ್ರೋ ಫೈನಾನ್ಸ್ ಕಿರುಕುಳ: ಮಹಿಳೆ ಆತ್ಮಹತ್ಯೆಗೆ ಶರಣು

ಮೈಕ್ರೋ ಫೈನಾನ್ಸ್ ಕಿರುಕುಳ: ಮಹಿಳೆ ಆತ್ಮಹತ್ಯೆಗೆ ಶರಣು

ಮೈಸೂರು,ನವೆಂಬರ್,29,2024 (www.justkannada.in): ಮೈಕ್ರೋ ಫೈನಾನ್ಸ್ ರಿಂದ ಕಿರುಕುಳದಿಂದ ಬೇಸತ್ತ ಮಹಿಳೆ ಕ್ರಿಮಿನಾಶಕ ಕಾಳಿನ ಮಾತ್ರೆ ನುಂಗಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಕಿರಿಜಾಜಿ ಗ್ರಾಮದಲ್ಲಿ ನಡೆದಿದೆ.

ಸುಶೀಲ (48) ವರ್ಷ ಮೃತಪಟ್ಟ ಮಹಿಳೆ. ಸುಶೀಲ್ ಅವರು ಹುಣಸೂರಿನ ಫಾರ್ಚುನ್ ಮೈಕ್ರೋ ಫೈನಾನ್ಸ್ ನಿಂದ ಸಾಲ ಪಡೆದಿದ್ದರು. ಪ್ರತಿ ತಿಂಗಳು ಸಕಾಲದಲ್ಲಿ ಸಾಲ ಪಾವತಿ ಮಾಡುತ್ತಿದ್ದರು. ಆದರೆ ಈ ವಾರ ಸಾಲ ಪಾವತಿ ವಿಳಂಬ ಹಿನ್ನೆಲೆ. ಮನೆ ಬಳಿ ಫೈನಾನ್ಸ್ ನವರು ಬಂದು ಗಲಾಟೆ ಮಾಡಿದ್ದರು.

ಈ ಕಾರಣ ಮನನೊಂದ  ಸುಶೀಲ ಕಾಳಿನ ಕ್ರಿಮಿನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದರು. ಮೈಸೂರಿನ ಕೆ ಆರ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಪುತ್ರ ನವೀನ್ ಪ್ರಕರಣ ದಾಖಲಿಸಿದ್ದಾರೆ.

Key words: Microfinance, Woman, suicide, mysore