Tuesday, September 29, 2026

BDA Apartments

Home Front Page ನಿರೀಕ್ಷೆಗೂ ಮೀರಿ ಗೆಲುವು: ಸಂತಸ ಹಂಚಿಕೊಂಡು ಹೆಚ್ ಡಿಕೆಗೆ ಟಾಂಗ್ ಕೊಟ್ಟ ಸಿ.ಪಿ ಯೋಗೇಶ್ವರ್

ನಿರೀಕ್ಷೆಗೂ ಮೀರಿ ಗೆಲುವು: ಸಂತಸ ಹಂಚಿಕೊಂಡು ಹೆಚ್ ಡಿಕೆಗೆ ಟಾಂಗ್ ಕೊಟ್ಟ ಸಿ.ಪಿ ಯೋಗೇಶ್ವರ್

ನಿರೀಕ್ಷೆಗೂ ಮೀರಿ ಗೆಲುವು puliyogare,ayyangar WhatsApp 11 16 at 12.03.42 PM

ಚನ್ನಪಟ್ಟಣ,ನವೆಂಬರ್,23,2024 (www.justkannada.in):  ಬಹು ಕುತೂಹಲ ಮೂಡಿಸಿದ್ದ ಚನ್ನಪಟ್ಟಣ ಉಪಚುನಾವಣಾ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಸುಮಾರು 25 ಸಾವಿರ ಮತಗಳ ಅಂತರದಿಂದ ಗೆದ್ದು ಬೀಗಿದ್ದು, ಈ ಮೂಲಕ  ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿಗೆ ಸೋಲಿನ ರುಚಿ ತೋರಿಸಿದ್ದಾರೆ.

ತಮ್ಮ ಗೆಲುವಿನ ಸಂತಸ ಹಂಚಿಕೊಂಡು ಮಾತನಾಡಿರುವ  ಸಿ.ಪಿ ಯೋಗೇಶ್ವರ್,  ಸಿಎಂ ಡಿಸಿಎಂಗೆ ಮಾತು ಕೊಟ್ಟಿದ್ದೆ ಕೊಟ್ಟ ಮಾತಿನಂತೆ ಗೆದ್ದಿದ್ದೇನೆ. ನಿರೀಕ್ಷಗೂ ಮೀರಿ ಗೆಲುವು ಸಾಧಿಸಿದ್ದೇನೆ. 30 ಸಾವಿರ ಮತಗಳ  ಅಂತರದಿಂದ ಗೆಲ್ಲುವ ನಿರೀಕ್ಷೆ ಮಾಡಿದ್ದೆ. ಈಗ ಗೆಲುವು ಸಾಧಿಸಿದ್ದೇನೆ ಎಂದರು.

ಹೆಚ್ ಡಿಕೆ ಸ್ವಾರ್ಥ ದುರಾಸೆಗೆ ಮಗನನ್ನೇ ಬಲಿಕೊಟ್ಟಿದ್ದಾರೆ.

ಇದೇ ವೇಳೆ ಜೆಡಿಎಸ್ ನಾಯಕರಿಗೆ ಟಾಂಗ್ ಕೊಟ್ಟಿರುವ ಸಿ.ಪಿ ಯೋಗೇಶ್ವರ್, ಮಾಜಿ ಪ್ರಧಾನಿ  ಹೆಚ್ ಡಿ ದೇವೇಗೌಡರು ಮೊಮ್ಮಗನನ್ನೇ ಪಣಕ್ಕಿಟ್ಟಿದ್ದರು. ಹೆಚ್ ಡಿ ಕುಮಾರಸ್ವಾಮಿ ಮಗನನ್ನೇ ಪಣಕ್ಕಿಟ್ಟಿದ್ದರು. ಮಗನ ಭವಿಷ್ಯ ರೂಪಿಸಬೇಕಿದ್ರೆ ಮಂಡ್ಯದಿಂದ ನಿಲ್ಲಿಸಿ ಗೆಲ್ಲಿಸಬಹುದಿತ್ತು. ಆದರೆ ಕುಮಾರಸ್ವಾಮಿ ಸ್ವಾರ್ಥ ದುರಾಸೆಗೆ ಮಗನನ್ನೆ ಬಲಿಕೊಟ್ಟಿದ್ದಾರೆ. ದೇವೇಗೌಡರನ್ನ ಜನರು ತಿರಸ್ಕರಿಸಿದ್ದಾರೆ. ಹೆಚ್ ಡಿ ದೇವೇಗೌಡರಿಗೆ ಮೊಮ್ಮಗನನ್ನು ಗೆಲ್ಲಿಸುವ ಸ್ವಾರ್ಥವಿತ್ತು. ಆದರೆ ಜನರು ಅದಕ್ಕೆ ಮನ್ನಣೆ ನೀಡಲಿಲ್ಲ ಎಂದು ಕಾಲೆಳೆದರು.

Key words: Channapatna, Congress Candidate, CP Yogeshwar, won