Saturday, August 15, 2026

BDA Apartments

Home Front Page ಬಿಜೆಪಿಯವರು 1000 ಕೋಟಿ ಬಗ್ಗೆ ಮಾತನಾಡಲಿ-ಡಿಸಿಎಂ ಡಿಕೆ ಶಿವಕುಮಾರ್ ಟಾಂಗ್

ಬಿಜೆಪಿಯವರು 1000 ಕೋಟಿ ಬಗ್ಗೆ ಮಾತನಾಡಲಿ-ಡಿಸಿಎಂ ಡಿಕೆ ಶಿವಕುಮಾರ್ ಟಾಂಗ್

ಬೆಂಗಳೂರು,ನವೆಂಬರ್,18,2024 (www.justkannada.in):  ಕಾಂಗ್ರೆಸ್ ಶಾಸಕರಿಗೆ 100 ಕೋಟಿ ಆಫರ್ ಕುರಿತು ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್ , ಬಿಜೆಪಿಯವರು 1000 ಕೋಟಿ ಬಗ್ಗೆ ಮಾತನಾಡಲಿ. ಈ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೇಳಬೇಕು ಎಂದು ಟಾಂಗ್ ಕೊಟ್ಟರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಬಿಜೆಪಿ 1000 ಕೋಟಿ ವಿಚಾರದ ಬಗ್ಗೆ ಮಾತನಾಡಲಿ. ಈ ಬಗ್ಗೆ ಯತ್ನಾಳ್ ದು ಕೇಳಬೇಕು. ಆರ್ ಅಶೋಕ್, ಬಿವೈ ವಿಜಯೇಂದ್ರಗೆ ನೀವು ಪ್ರಶ್ನೆ ಕೇಳಲ್ಲ ನಮ್ಮನ್ನು ಮಾತ್ರ ಕೇಳ್ತೀರಲಾ ತನಿಖೆ ಅಲ್ಲ ಮೊದಲು ಅವರು ಇಂಟರ್ನಲ್ ತನಿಖೆ ಮಾಡಲಿ, ನೀವು ಅವರನ್ನು ಕೇಳಬೇಕು. ನಾವು  ತನಿಖೆ ಮಾಡುತ್ತೇವೆ ಬಿಡಲ್ಲ ಎಂದು ಮಾಧ್ಯಮದವರಿಗೆ ತಿಳಿಸಿದರು.

ಬಿಪಿಎಲ್ ಕಾರ್ಡ್ ರದ್ದು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್, ಬಿಜೆಪಿಯವರಿಗೆ ಮಾಡೋದಿಕ್ಕೆ ಕೆಲಸವಿಲ್ಲ. ನಾವು ಯಾರ ಅನ್ನವನ್ನೂ ಕಿತ್ತುಕೊಳ್ಳಲ್ಲ.   ಬಿಪಿಎಲ್ ಕಾರ್ಡ್ ಬಗ್ಗೆ ನಾವು ನೋಡ್ತೀವಿ, ನಮ್ಮ ಕ್ಷೇತ್ರ, ಜಿಲ್ಲೆಯಲ್ಲಿ 90 ಪರ್ಸೆಂಟ್ ಬಿಪಿಎಲ್ ಇದೆ ಅಂತಿದೆ. ಒಂದು ಬಾರಿ ರಿವ್ಯೂ ಮಾಡಬೇಕಲ್ವಾ. ನಾನು ಚುನಾವಣೆಗೆ ಹೋದಾಗಲೂ ಜನರು ಈ ವಿಚಾರ ನನ್ನ ಗಮನಕ್ಕೆ ತಂದಿದ್ದರು ಎಂದರು.

Key words:  BJP, talk, about ,1000 crores, DCM DK Shivakumar