Friday, August 14, 2026

BDA Apartments

Home Front Page ಮುಡಾ ಕೇಸ್: ವಿಚಾರಣೆಗೆ ಹಾಜರಾಗುವಂತೆ ಹಿಂದಿನ ಆಯುಕ್ತ ನಟೇಶ್ ರಿಗೆ ಲೋಕಾಯುಕ್ತ ನೋಟಿಸ್

ಮುಡಾ ಕೇಸ್: ವಿಚಾರಣೆಗೆ ಹಾಜರಾಗುವಂತೆ ಹಿಂದಿನ ಆಯುಕ್ತ ನಟೇಶ್ ರಿಗೆ ಲೋಕಾಯುಕ್ತ ನೋಟಿಸ್

ಮೈಸೂರು,ನವೆಂಬರ್,18,2024 (www.justkannada.in):  ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಮೈಸೂರು ಲೋಕಾಯುಕ್ತ ಅಧಿಕಾರಿಗಳು ಇದೀಗ ಮುಡಾದ ಹಿಂದಿನ ಆಯುಕ್ತ ನಟೇಶ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.

ನಾಳೆ ವಿಚಾರಣೆಗೆ ಹಾಜರಾಗುವಂತೆ  ಹಿಂದಿನ ಆಯುಕ್ತ ನಟೇಶ್ ಅವರಿಗೆ ಲೋಕಾಯುಕ್ತ ಎಸ್ಪಿ ಟಿಜೆ ಉದೇಶ್ ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ.  ನಟೇಶ್ ಅವರ ವಿಚಾರಣೆಗೆ ಅನುಮತಿ ನೀಡುವಂತೆ ರಾಜ್ಯಮುಖ್ಯಕಾರ್ಯದರ್ಶಿ ಅವರಿಗೆ ಟಿಜೆ ಉದೇಶ್ ಮನವಿ ಮಾಡಿದ್ದರು.

ಎರಡು ದಿನಗಳ ಹಿಂದ ವಿಚಾರಣೆಗೆ ಸಿಎಸ್ ಅನುಮತಿ ನೀಡಿದ್ದರು. ಇದೀಗ ನಾಳೆ ವಿಚಾರಣೆಗೆ ಹಾಜರಾಗುವಂತೆ ನಟೇಶ್  ಅವರಿಗೆ ಲೋಕಾಯುಕ್ತ ನೋಟಿಸ್ ನೀಡಿದೆ. ಪ್ರಕರಣ ಸಂಬಂಧ ಈಗಾಗಲೇ ಸಿಎಂ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ ಸೇರಿ ಹಲವರನ್ನ ವಿಚಾರಣೆಗೊಳಪಡಿಸಿದೆ.

Key words:  Muda case, Lokayukta, notice, Natesh