Thursday, August 13, 2026

BDA Apartments

Home Front Page ಜಮೀರ್ ಮಾತು ಚುನಾವಣೆ ಮೇಲೆ ಅಂತಹ ಪರಿಣಾಮ ಬೀರಲ್ಲ- ಸಚಿವ ದಿನೇಶ್ ಗುಂಡೂರಾವ್

ಜಮೀರ್ ಮಾತು ಚುನಾವಣೆ ಮೇಲೆ ಅಂತಹ ಪರಿಣಾಮ ಬೀರಲ್ಲ- ಸಚಿವ ದಿನೇಶ್ ಗುಂಡೂರಾವ್

ಮಂಗಳೂರು,ನವೆಂಬರ್,16,2024 (www.justkannada.in): ಕೇಂದ್ರ ಸಚಿವ ಹೆಚ್ ಡಿ ಕುಮಾರ ಸ್ವಾಮಿ ಬಗ್ಗೆ ಸಚಿವ  ಜಮೀರ್ ಅಹ್ಮದ್ ಖಾನ್  ಹೇಳಿಕೆ  ಕುರಿತು ಪ್ರತಿಕ್ರಿಯಿಸಿದ ಆರೋಗ್ಯ ಸಚಿವ  ದಿನೇಶ್ ಗುಂಡೂರಾವ್ , ಜಮೀರ್ ಹೇಳಿಕೆ ಸರಿಯಲ್ಲ. ಆದರೆ ಇದು ಚುನಾವಣೆ ಮೇಲೆ ಅಂತಹ ಪರಿಣಾಮ ಬೀರಲ್ಲ  ಎಂದಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಜಮೀರ್ ಅವರು ಕೆಲವೊಮ್ಮೆ ಆಡು ಭಾಷೆಯಲ್ಲಿ ಮಾತನಾಡುತ್ತಾರೆ. ಆದರೆ ಸಾರ್ವಜನಿಕವಾಗಿ ಆ ರೀತಿ ಮಾತನಾಡಬಾರದು. ಜಮೀರ್ ಮಾತು ಚುನಾವಣೆ ಮೇಲೆ ಏನು ಪರಿಣಾಮ ಬೀರುತ್ತೊ ಗೊತ್ತಿಲ್ಲ. ನಾನು ಚೆನ್ನಪಟ್ಟಣದಲ್ಲಿದ್ದೆ, ಜಮೀರ್ ಅವರ ಬಗ್ಗೆ ಎಲ್ಲರಿಗೆ ಗೊತ್ತಿದೆ. ಈಗಾಗಲೇ ತಮ್ಮ ಹೇಳಿಕೆಗೆ ಜಮೀರ್ ಅವರೂ ವಿಷಾದ ವ್ಯಕ್ತ ಪಡಿಸಿದ್ದಾರೆ. ಅದೇನು ಅಂತಹ ದೊಡ್ಡ ವಿಚಾರ ಅಲ್ಲ. ಆದರೆ ಸಾರ್ವಜನಿಕ ವಲಯದಲ್ಲಿ ನಾವು ಏನು ಮಾತನಾಡುತ್ತೇವೊ ಸ್ವಲ್ಪ ಎಚ್ಚರಿಕೆಯಿಂದ ಮಾತನಾಡಬೇಕು ಎಂದರು.

ಹುಚ್ಚಾಸ್ಪತ್ರೆಯಲ್ಲಿರಬೇಕಾದವರು ಕ್ಯಾಬಿನೆಟ್ ನಲ್ಲಿದ್ದಾರೆ ಎಂಬ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ  ಸಚಿವ ದಿನೇಶ್ ಗುಂಡೂರಾವ್, ಅರಗ ಜ್ಞಾನೇಂದ್ರ ಅತ್ಯಂತ ಲಘುವಾಗಿ ಮತನಾಡುತ್ತಿದ್ದಾರೆ. ಅವರಿಗೆ ಬುದ್ಧಿ ಭ್ರಮಣೆಯಾಗಿದೆ. ಮೊದಲು ಅವರ ಮೇಲಿರುವ ಆರೋಪಗಳಿಗೆ ಅರಗ ಜ್ಞಾನೇಂದ್ರ ಉತ್ತರ ನೀಡಲಿ ಎಂದು ತಿರುಗೇಟು ನೀಡಿದರು.

Key words: Jameer,  speech, impact, election, Minister, Dinesh Gundurao