Sunday, August 23, 2026

BDA Apartments

Home Crime ಮೊಬೈಲ್ ರಿಪೇರಿ ಮಾಡಿಸುವಂತೆ ಕೇಳಿದ ಮಗನನ್ನೇ ಕೊಂದ ತಂದೆ

ಮೊಬೈಲ್ ರಿಪೇರಿ ಮಾಡಿಸುವಂತೆ ಕೇಳಿದ ಮಗನನ್ನೇ ಕೊಂದ ತಂದೆ

ಬೆಂಗಳೂರು,ನವೆಂಬರ್,16,2024 (www.justkannada.in): ಮೊಬೈಲ್ ರಿಪೇರಿ ಮಾಡಿಸುವಂತೆ ಕೇಳಿದ ಮಗನನ್ನೇ ತಂದೆ ಕೊಲೆ ಮಾಡಿರುವ  ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ತೇಜಸ್ (14) ತಂದೆಯಿಂದಲೇ ಕೊಲೆಯಾದ ಮಗ. ರವಿಕುಮಾರ್ ಎಂಬಾತನೇ ತನ್ನ ಮಗನನ್ನೇ  ಕೊಂದ ತಂದೆ  ತೇಜಸ್ ತನ್ನ ತಂದೆಯ ಬಳಿ ಮೊಬೈಲ್ ರಿಪೇರಿ ಮಾಡಿಸಿಕೊಡುವಂತೆ ಕೇಳಿದ್ದ. ಈ ವೇಳೆ ಮಗನಿಗೆ ರವಿಕುಮಾರ್ ಮನಸೋಇಚ್ಚೆ ಹಲ್ಲೆ ಮಾಡಿ ಬಳಿಕ ಮಗನ ತಲೆಯನ್ನು ಗೋಡೆಗೆ ಜಜ್ಜಿ ಹತ್ಯೆಗೈದಿದ್ದಾನೆ ಎನ್ನಲಾಗಿದೆ.

ಕಳೆದ 20 ದಿನಗಳಿಂದ ಮಗ ಶಾಲೆಗೆ ಹೋಗದೆ ಪುಂಡರ ಜೊತೆ ಅಲೆದಡುತ್ತಿದ್ದಂನಂತೆ ಮೊಬೈಲ್ ರಿಪೇರಿ ಮಾಡಿಸಿಕೊಡುವಂತೆ ತಂದೆ ಬಳಿ ಕೇಳಿದ್ದ ಎನ್ನಲಾಗಿದೆ. ಇದರಿಂದ ಕೋಪಗೊಂಡ ತಂದೆ ರವಿಕುಮಾರ್ ಹಲ್ಲೆ ಮಾಡಿದ್ದು, . ಗಂಭೀರವಾಗಿ ಗಾಯಗೊಂಡಿದ್ದ ತೇಜಸ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಈ ಕುರಿತು ಕುಮರಸ್ವಾಮಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Key words: father, murder, son, repair ,  mobile phone