Tuesday, September 29, 2026

BDA Apartments

ದೇಶದ 51ನೇ ಸಿಜೆಐ ಆಗಿ ಸಂಜೀವ್ ಖನ್ನಾ ಪ್ರಮಾಣವಚನ ಸ್ವೀಕಾರ BDA JK_Adv BDA Adv
Home Front Page ದೇಶದ 51ನೇ ಸಿಜೆಐ ಆಗಿ ಸಂಜೀವ್ ಖನ್ನಾ ಪ್ರಮಾಣವಚನ ಸ್ವೀಕಾರ

ದೇಶದ 51ನೇ ಸಿಜೆಐ ಆಗಿ ಸಂಜೀವ್ ಖನ್ನಾ ಪ್ರಮಾಣವಚನ ಸ್ವೀಕಾರ

ನವದೆಹಲಿ, ನವೆಂಬರ್, 11,2024 (www.justkannada.in):   ಸುಪ್ರೀಂಕೋರ್ಟ್ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ಸಂಜೀವ್‌ ಖನ್ನಾ ಅವರು ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದರು.

ಇಂದು ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೂತನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರಿಗೆ ಪ್ರಮಾಣ ವಚನ ಬೋಧಿಸಿದರು.

ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರ ಅಧಿಕಾರಾವಧಿ ನಿನ್ನೆ ಮುಕ್ತಾಯವಾಗಿದ್ದು ನೂತನ ಸಿಜೆಐ ಆಗಿ ಸಂಜೀವ್ ಖನ್ನಾ ಅವರು ನೇಮಕಗೊಂಡಿದ್ದರು. ಇದೀಗ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆರು ತಿಂಗಳಿಗೂ ಹೆಚ್ಚು ಕಾಲ ಸಿಜೆಐ ಆಗಿ ಸೇವೆ ಸಲ್ಲಿಸಲಿರುವ ನ್ಯಾಯಮೂರ್ತಿ ಖನ್ನಾ ಅವರು ಮೇ 13, 2025 ರಂದು ಅಧಿಕಾರದಿಂದ ನಿವತ್ತರಾಗಲಿದ್ದಾರೆ.

Key words: Sanjeev Khanna, sworn,  CJI, Supreme court