Thursday, August 13, 2026

BDA Apartments

Home Front Page ಬಿಜೆಪಿಗಿಂತ ಕರಿಯ ಕುಮಾರಸ್ವಾಮಿ ಡೇಂಜರ್: ವಿವಾದಾತ್ಮಕ ಹೇಳಿಕೆ ನೀಡಿದ ಸಚಿವ ಜಮೀರ್

ಬಿಜೆಪಿಗಿಂತ ಕರಿಯ ಕುಮಾರಸ್ವಾಮಿ ಡೇಂಜರ್: ವಿವಾದಾತ್ಮಕ ಹೇಳಿಕೆ ನೀಡಿದ ಸಚಿವ ಜಮೀರ್

ಚನ್ನಪಟ್ಟಣ,ನವೆಂಬರ್ ,11,2024 (www.justkannada.in): ಚನ್ನಪಟ್ಟಣ ಉಪಚುನಾವಣಾ ಕಣ ರಂಗೇರಿದ್ದು ಈ ಮಧ್ಯೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಕುರಿತು ಸಚಿವ ಜಮೀರ್ ಅಹ್ಮದ್ ಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಚನ್ನಪಟ್ಟಣದಲ್ಲಿ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಹೊಗಳುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.  ಪ್ರಚಾರದ ವೇಳೆ ಮಾತನಾಡಿರುವ ಸಚಿವ ಜಮೀರ್  ಅಹ್ಮದ್ ಖಾನ್, ಬಿಜೆಪಿಗಿಂತ ಕರಿಯ ಕುಮಾರಸ್ವಾಮಿ ಡೇಂಜರ್.  ಅದಕ್ಕೆ ಸಿಪಿ ಯೋಗೇಶ್ವರ್  ಜೆಡಿಎಸ್ ಗೆ  ಹೋಗಲಿಲ್ಲ ಎಂದಿದ್ದಾರೆ.

ಏಯ್ ಕುಮಾರಸ್ವಾಮಿ ಹಿಜಾಬ್ ಬೇಡ ಪಜಾಬ್  ಬೇಡ ಅಂತಿಯಾ.  ಈಗ ನಿನಗೆ ಮುಸಲ್ಮಾನರ ವೋಟು ಬೇಕಾ? ಏಯ್ ಕುಮಾರಸ್ವಾಮಿ  ಮುಸ್ಲೀಮರನ್ನ ಖರೀದಿಸ್ತೀಯಾ.  ಒಂದೊಂದು ಪೈಸೆ ಸಂಗ್ರಹಿಸಿ ನಿನ್ನ ಕುಟುಂಬವನ್ನೇ ಖರೀದಿಸುವ ಶಕ್ತಿ ಮುಸ್ಲೀಮರಿಗಿದೆ ಎಂದು ಜಮೀರ್ ಕಿಡಿಕಾರಿದ್ದಾರೆ.

Key words: Kariya, Kumaraswamy, Minister Jamir, controversial statement