Friday, August 7, 2026

BDA Apartments

Home Front Page ಬಿಸಿಸಿಐ ವಿರುದ್ಧ ಆಕ್ರೋಶ ಹೊರಹಾಕಿದ ಯುವಿ

ಬಿಸಿಸಿಐ ವಿರುದ್ಧ ಆಕ್ರೋಶ ಹೊರಹಾಕಿದ ಯುವಿ

ಬೆಂಗಳೂರು, ಸೆಪ್ಟೆಂಬರ್ 27, 2019 (www.justkannada.in): ಮಾಜಿ ಕ್ರಿಕೆಟರ್ ಯುವರಾಜ್ ಸಿಂಗ್ ತಮ್ಮ ನಿವೃತ್ತಿಗೆ ಸಂಬಂಧಿಸಿದಂತೆ ಬಿಸಿಸಿಐ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟೀಂ ಇಂಡಿಯಾದ ಮ್ಯಾನೇಜ್ಮೆಂಟ್ ವಿರುದ್ಧವೂ ಯುವರಾಜ್ ಸಿಂಗ್ ಪ್ರಶ್ನೆ ಮಾಡಿದ್ದಾರೆ. ತಂಡದಿಂದ ಹೊರ ಹಾಕಲು ಮ್ಯಾನೇಜ್ಮೆಂಟ್ ಸದಸ್ಯರು ಕಾರಣ ಹುಡುಕುತ್ತಿದ್ದರು ಎಂದು ಯುವರಾಜ್ ಹೇಳಿದ್ದಾರೆ.

ಇದೇ ಕಾರಣಕ್ಕೆ ಯೋ ಯೋ ಪರೀಕ್ಷೆಯನ್ನು ಅನಿವಾರ್ಯ ಮಾಡಿದ್ರು ಎಂದಿದ್ದಾರೆ.