Saturday, September 12, 2026

BDA Apartments

ಡ್ರಂಕ್‌ ಅಂಡ್‌ ಡ್ರೈವ್‌ ಕೇಸ್‌ ನಲ್ಲಿ ನಟಿ ರಜಿತಾ ರಾಮ್ ಬಂಧನ..! BDA JK_Adv BDA Adv
Home Cinema ಡ್ರಂಕ್‌ ಅಂಡ್‌ ಡ್ರೈವ್‌ ಕೇಸ್‌ ನಲ್ಲಿ ನಟಿ ರಜಿತಾ ರಾಮ್ ಬಂಧನ..!

ಡ್ರಂಕ್‌ ಅಂಡ್‌ ಡ್ರೈವ್‌ ಕೇಸ್‌ ನಲ್ಲಿ ನಟಿ ರಜಿತಾ ರಾಮ್ ಬಂಧನ..!

Actress Rajitha crashed into two vehicles on MC Road in Thiruvananthapuram allegedly under the influence of alcohol.

 

ಕೇರಳ, ಅ.04,2024: (www.justkannada.in news) ತಿರುವನಂತಪುರಂನ ಎಂಸಿ ರಸ್ತೆಯಲ್ಲಿ ನಟಿ ರಜಿತಾ ರಾಮ್‌ ಮದ್ಯದ ಅಮಲಿನಲ್ಲಿ ಎರಡು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾರೆ.

ಡ್ರಂಕ್‌ ಅಂಡ್‌ ಡ್ರೈವ್‌ ಕೇಸ್‌ ನಲ್ಲಿ ನಟಿ ರಜಿತಾ ರಾಮ್ ಬಂಧನ..! VTU TOP BANNER 04

ವರದಿಯ ಪ್ರಕಾರ ಈ ಪ್ರದೇಶದಲ್ಲಿ ಗುರುವಾರ (ಅಕ್ಟೋಬರ್ 3) ಸಂಜೆ 7 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಸುಮಾರು ಒಂದು ಗಂಟೆ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮಿನಿ ಲಾರಿ ಮತ್ತು ನಿಂತಿದ್ದ ಕಾರಿಗೆ ಡಿಕ್ಕಿಯಾದ ಘಟನೆಯನ್ನು ಕಂಡು ನಟಿ ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ನಂತರ ಪೊಲೀಸರು ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಪರೀಕ್ಷೆಯಲ್ಲಿ ಆಕೆಯ ದೇಹದಲ್ಲಿ ಮದ್ಯದ ಅಂಶ ಇರುವುದು ದೃಢಪಟ್ಟಿದೆ. ಇದು ನಟಿಯ ಬಂಧನಕ್ಕೆ ಕಾರಣವಾಯಿತು . ಆದರೆ ಬಳಿಕ ಆಕೆಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.

ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ ಆದರೆ ಡಿಕ್ಕಿಯ ರಭಸಕ್ಕೆ ಆಕೆಯ ಕಾರಿನ ಮುಂಭಾಗಕ್ಕೆ ಹಾನಿಯಾಗಿದೆ. ಪೊಲೀಸರು ಈಗಾಗಲೇ ತಿರುವನಂತಪುರದ ವೆಂಜರಮೂಡು ಮೂಲದ ರಜಿತಾ (31) ಅವರ ಸ್ನೇಹಿತ ಮತ್ತು ಆರ್‌ಜೆ  ರಾಜು (49) ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ ನಂತರ ರಜಿತಾ ಅವರ ಕಾರು ಮಿನಿ ಲಾರಿಗೆ ಡಿಕ್ಕಿ ಹೊಡೆದಿದೆ. ಪೊಲೀಸರ ವಿಚಾರಣೆಯಲ್ಲಿ ನಟಿ ರಜಿತಾ ರಾಂ, ಮದ್ಯಪಾನ ಸೇವಿಸಿದ್ದನ್ನು ಒಪ್ಪಿಕೊಂಡರು ಎನ್ನಲಾಗಿದೆ.

key words: Actress Rajitha Ram, crashed into two vehicles, Thiruvananthapuram, allegedly under the influence of alcohol.

ರಕರಣ TOP-BANNER-01 TOP BANNER 01

SUMMARY:

Actress Rajitha crashed into two vehicles on MC Road in Thiruvananthapuram allegedly under the influence of alcohol.