Sunday, September 13, 2026

BDA Apartments

ಮೈಸೂರು ದಸರಾ ಗಜಪಡೆಯ ಮಾವುತರು, ಕಾವಾಡಿಗರ ಕುಟುಂಬಕ್ಕೆ ಪಾದರಕ್ಷೆ ವಿತರಣೆ BDA...
Home Front Page ಮೈಸೂರು ದಸರಾ ಗಜಪಡೆಯ ಮಾವುತರು, ಕಾವಾಡಿಗರ ಕುಟುಂಬಕ್ಕೆ ಪಾದರಕ್ಷೆ ವಿತರಣೆ

ಮೈಸೂರು ದಸರಾ ಗಜಪಡೆಯ ಮಾವುತರು, ಕಾವಾಡಿಗರ ಕುಟುಂಬಕ್ಕೆ ಪಾದರಕ್ಷೆ ವಿತರಣೆ

ಮೈಸೂರು,ಸೆಪ್ಟಂಬರ್,28,2024 (www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಪ್ರಮುಖ ಆಕರ್ಷಣೆ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಗಜಪಡೆಯ ಮಾವುತರು ಮತ್ತು ಕಾವಾಡಿಗರ ಕುಟುಂಬಕ್ಕೆ ಪಾದರಕ್ಷೆಗಳನ್ನ ವಿತರಿಸಲಾಯಿತು.

ಅರಮನೆ ಆವರಣದಲ್ಲಿ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ  ಡಾ.ಹೆಚ್‌.ಸಿ.ಮಹದೇವಪ್ಪ ಅವರು ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸಿರುವ ಗಜಪಡೆಯ ಮಾವುತರು ಹಾಗೂ ಕಾವಾಡಿಗರ ಕುಟುಂಬಕ್ಕೆ ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ (ಲಿಡ್‌ಕರ್) ವತಿಯಿಂದ ಸಿದ್ಧಪಡಿಸಿದ ಪಾದರಕ್ಷೆಗಳನ್ನು ಇಂದು ವಿತರಿಸಿದರು.

ಈ ವೇಳೆ ಚಲನಚಿತ್ರ ನಟ ಹಾಗೂ ಲಿಡ್ಕರ್ ರಾಯಭಾರಿ ಡಾಲಿ ಧನಂಜಯ ಅವರು, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಲಿಡ್ಕರ್ ವ್ಯವಸ್ಥಾಪಕ ನಿರ್ದೇಶಕಿ ವಸುಂದರ ಅವರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಮೈಸೂರು ದಸರಾ ಗಜಪಡೆಯ ಮಾವುತರು VTU TOP BANNER 04

Key words: Mysore Dasara, Gajapade, Mavuta, Kavadiga, footwear