Thursday, August 6, 2026

BDA Apartments

Home Front Page ಸೌಜನ್ಯಕ್ಕಷ್ಟೆ ಪೊನ್ನಣ್ಣ ಭೇಟಿ: ಹೆಚ್.ಡಿಕೆ ಆರೋಪಕ್ಕೆ ಉತ್ತರಿಸಲ್ಲ- ಸಿಎಂ ಸಿದ್ದರಾಮಯ್ಯ

ಸೌಜನ್ಯಕ್ಕಷ್ಟೆ ಪೊನ್ನಣ್ಣ ಭೇಟಿ: ಹೆಚ್.ಡಿಕೆ ಆರೋಪಕ್ಕೆ ಉತ್ತರಿಸಲ್ಲ- ಸಿಎಂ ಸಿದ್ದರಾಮಯ್ಯ

ಮೈಸೂರು,ಸೆಪ್ಟಂಬರ್,28,2024 (www.justkannada.in): ಕಾನೂನು ಸಲಹೆಗಾರ ಪೊನ್ನಣ್ಣ ಭೇಟಿ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಕಾನೂನು ಸಲಹೆಗಾರ ಪೊನಣ್ಣ ನನ್ನನ್ನು ಭೇಟಿಯಾಗಿದ್ದಾರೆ ಅಷ್ಟೇ. ಅವರು ತಮ್ಮ ಕ್ಷೇತ್ರಕ್ಕೆ ಹೋಗುತ್ತಿದ್ದರು. ಹೀಗಾಗಿ ಸೌಜನ್ಯವಾಗಿ ಬಂದಿದ್ದಾರೆ ಅಷ್ಟೇ ಎಂದರು.

ಮೈಸೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇಂದು ಮಾಧ್ಯಮಗಳಿಗೆ ಹೇಳುವುದಕ್ಕೆ ಏನು ಇಲ್ಲ. ನೀವೇ ಏನಾದರೂ ಇದ್ದರೆ ಹೇಳಿ. ಕಾನೂನು ಸಲಹೆಗಾರ ಪೊನಣ್ಣ ನನ್ನನ್ನು ಭೇಟಿಯಾಗಿದ್ದಾರೆ ಅಷ್ಟೇ. ನಾನು ಅವರ ಬಳಿ ಯಾವ ಚರ್ಚೆಗಳನ್ನ ಮಾಡಿಲ್ಲ. ಕಾನೂನು ಹೋರಾಟದ ವಿಚಾರವನ್ನ ನಮ್ಮ ಕಾನೂನಿನ ಟೀಂ ನೋಡಿಕೊಳ್ಳುತ್ತದೆ ಎಂದರು.

ಇದೇ ವೇಳೆ ಕೇಂದ್ರ ಸಚಿವ ಹೆಚ್.ಡಿಕೆ ವಿರುದ್ದ ವಾಗ್ದಾಳಿ ನಡೆಸಿದ ಸಿಎಂ ಸಿದ್ದರಾಮಯ್ಯ, ಕುಮಾರಸ್ವಾಮಿಯ ಈ ಆರೋಪಗಳಿಗೆ ನಾನು ಉತ್ತರ ಕೊಡುವುದಿಲ್ಲ. ಕುಮಾರಸ್ವಾಮಿ ಆರೋಪಕ್ಕೆ ಉತ್ತರ ಕೊಡಬೇಕು ಅಂಥ ಎಲ್ಲಿದೆ ಹೇಳಿ. ಈ ಆರೋಪಗಳಿಗೆ ಉತ್ತರ ಕೊಡಲ್ಲ ಎಂದ ಮೇಲೆ ನಾನು ಕೊಡುವುದಿಲ್ಲ. ಮತ್ತೆ ಮತ್ತೆ ಅದನ್ನೇ ನನ್ನ ಬಳಿ ಕೇಳಬೇಡಿ. 8 ಗಂಟೆ ಅವಧಿಯ ಔಟ್ ಪುಟ್ ಏನು ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಏನು ಉತ್ತರ ಕೊಡಬೇಕು ಹೇಳಿ. ಮಾಧ್ಯಮಗಳಿಗೆ ನಿನ್ನೆಯೇ ಎಲ್ಲಾ ವಿವರಗಳನ್ನ ಕೊಟ್ಟಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

Key words: CM Siddaramaiah, does not , respond, HDK,  allegations