Thursday, August 6, 2026

BDA Apartments

Home Front Page ಉಪಚುನಾವಣೆ: ಕೆ.ಆರ್ ಪುರಂ ಕ್ಷೇತ್ರದಿಂದ ಭೈರತಿ ಬಸವರಾಜ್ ಗೆ ಟಿಕೆಟ್ ನೀಡದಂತೆ ಬಿಜೆಪಿ ಕಾರ್ಯಕರ್ತರಿಂದ ಆಗ್ರಹ…

ಉಪಚುನಾವಣೆ: ಕೆ.ಆರ್ ಪುರಂ ಕ್ಷೇತ್ರದಿಂದ ಭೈರತಿ ಬಸವರಾಜ್ ಗೆ ಟಿಕೆಟ್ ನೀಡದಂತೆ ಬಿಜೆಪಿ ಕಾರ್ಯಕರ್ತರಿಂದ ಆಗ್ರಹ…

ಬೆಂಗಳೂರು,ಸೆ,25,2019(www.justkannada.in): ಅಕ್ಟೋಬರ್ 21 ರಂದು ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು ಈ ನಡುವೆ ಕೆ.ಆರ್ ಪುರಂ ಕ್ಷೇತ್ರದಿಂದ ಅನರ್ಹ ಶಾಸಕ ಭೈರತಿ ಬಸವರಾಜ್ ಗೆ ಟಿಕೆಟ್ ನೀಡದಂತೆ ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಕೆ.ಆರ್ ಪುರಂ ಕ್ಷೇತ್ರದಲ್ಲಿ ಮಾಜಿ ಶಾಸಕ ನಂದೀಶ್ ರೆಡ್ಡಿ ಬಿಜೆಪಿ ಪಕ್ಷವನ್ನ ಕಟ್ಟಿ ಬೆಳೆಸಿದ್ದಾರೆ. ಲೋಕಸಭೆ ಚುನಾವಣೆಯಲ್ಲೂ ಈ ಕ್ಷೇತ್ರದಲ್ಲಿ ಹೆಚ್ಚು ಲೀಡ್ ಬಂದಿದೆ. ಸುಮಾರು 15 ಸಾವಿರ ಲೀಡ್ ತಂದು ಕೊಟ್ಟಿದ್ದಾರೆ. ಇದು  ಮಾಜಿ ಶಾಸಕ ನಂದೀಶ್ ರೆಡ್ಡಿ ಅವರ ಶ್ರಮದಿಂದ ಲೀಡ್ ಸಿಕ್ಕಿದೆ. ಹೀಗಾಗಿ ನಂದೀಶ್ ರೆಡ್ಡಿ ಅವರಿಗೆ ಟಿಕೆಟ್ ನೀಡುವಂತೆ ನಿನ್ನೆ ರಾತ್ರಿ ನಡೆದ ಸಭೆಯಲ್ಲಿ  ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ ಎನ್ನಲಾಗಿದೆ.

ಒಂದು ವೇಳೆ ಭೈರತಿ ಬಸವರಾಜ್ ಗೆ ಟಿಕೆಟ್ ನೀಡಿದರೇ ನಿಮ್ಮ ದಾರಿ ನಿಮಗೆ ನಮ್ಮದಾರಿ ನಮಗೆ  ಎಂದು ರಾಜ್ಯ ಬಿಜೆಪಿ ನಾಯಕರಿಗೆ ಎಚ್ಚರಿಕೆ ರವಾನಿಸಿದ್ದಾರೆ. ಅನರ್ಹ ಶಾಸಕರಿಗೆ ಟಿಕೆಟ್ ನೀಡುವುದರಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಬಂಡಾಯವೆಳುವ ಸಾಧ್ಯತೆ ಇದೆ.

Key words: By-election- bairathi Basavraj- ticket – KR Puram- constituency -bjp