Sunday, September 20, 2026

BDA Apartments

ಮೈಸೂರು: ಚಾಲಕನ ಅಜಾಗರೂಕತೆ: ವಿದ್ಯುತ್ ಕಂಬಕ್ಕೆ ಗುದ್ದಿದ ಕಾರು… BDA JK_Adv BDA Adv
Home Crime ಮೈಸೂರು: ಚಾಲಕನ ಅಜಾಗರೂಕತೆ: ವಿದ್ಯುತ್ ಕಂಬಕ್ಕೆ ಗುದ್ದಿದ ಕಾರು…

ಮೈಸೂರು: ಚಾಲಕನ ಅಜಾಗರೂಕತೆ: ವಿದ್ಯುತ್ ಕಂಬಕ್ಕೆ ಗುದ್ದಿದ ಕಾರು…

ಮೈಸೂರು,ಸೆ,23,2019(www.justkannada.in): ಚಾಲಕನ ಅಜಾಗರೂಕತೆಯಿಂದಾಗಿ  ವಿದ್ಯುತ್ ಕಂಬಕ್ಕೆ ಕಾರು ಗುದ್ದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಜೆಪಿನಗರದ ನಾಚನಪಾಳ್ಯ ರಸ್ತೆಯ ಪೆಟ್ರೋಲ್ ಬಂಕ್ ಬಳಿ ಈ ಘಟನೆ ನಡೆದಿದೆ. ಸದ್ಯ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ವಿಂಟೋ ಕಾರು ಗುದ್ದಿದ ರಭಸಕ್ಕೆ ವಿದ್ಯುತ್ ಕಂಬ ಕಟ್ ಆಗಿದ್ದು, ವಿದ್ಯುತ್ ಇರುವಾಗಲೇ ಘಟನೆ ಸಂಭವಿಸಿದೆ. ವಿದ್ಯುತ್ ಕಂಬ ಕಾರಿನ ಮೇಲೆಯೇ ನಿಂತುಕೊಂಡಿದೆ.

ಕಾರು ಗುದ್ದಿದ ಬಳಿಕ ವಿದ್ಯುತ್ ಸ್ಪರ್ಶವಾಗುವ ಮುನ್ನವೇ ಚಾಲಕ ಕಾರಿನಿಂದ ಜಂಪ್ ಮಾಡಿ ಅಪಾಯದಿಂದ ಪಾರಾಗಿದ್ದಾನೆ. ಕಾರು ಮೂಲತಃ ಮಹಾರಾಷ್ಟ್ರದ ಮೂಲದಾಗಿದ್ದು, ಬಾಡಿಗೆ ಪಡೆದುಕೊಂಡು ಚಾಲನೆ ಮಾಡುತ್ತಿದ್ದರು ಎನ್ನಲಾಗಿದೆ.  ಸ್ಥಳಕ್ಕೆ ಕೆಇಬಿ ಸಿಬ್ಬಂದಿ ಆಗಮಿಸಿ ಪವರ್ ಕಟ್ ಮಾಡಿದ್ದು, ವಿದ್ಯಾರಣ್ಯಪುರಂ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Key words: mysore-Driver- car colliding – power pole