Friday, August 7, 2026

BDA Apartments

Home Front Page ಭ್ರಷ್ಟಾಚಾರ ಕಿರಿಟ ತೊಟ್ಟವರು ಯಡಿಯೂರಪ್ಪ: ಅವರಿಂದ ನೈತಿಕತೆ ಕಲಿಬೇಕಾ? ಸಚಿವ ದಿನೇಶ್ ಗುಂಡೂರಾವ್

ಭ್ರಷ್ಟಾಚಾರ ಕಿರಿಟ ತೊಟ್ಟವರು ಯಡಿಯೂರಪ್ಪ: ಅವರಿಂದ ನೈತಿಕತೆ ಕಲಿಬೇಕಾ? ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು,ಆಗಸ್ಟ್,19,2024 (www.justkannada.in): ಮುಡಾ ಹಗರಣದಲ್ಲಿ  ಸಿಎಂ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ಬೆನ್ನಲ್ಲೆ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸುತ್ತಿರವ ಬಿಜೆಪಿ ಜೆಡಿಎಸ್ ವಿರುದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಭ್ರಷ್ಟಾಚಾರ ಕಿರಿಟ ತೊಟ್ಟವರು ಬಿಎಸ್  ಯಡಿಯೂರಪ್ಪ. ಅವರಿಂದ ನೈತಿಕತೆ ಕಲಿಬೇಕಾ?  ಯಾವ ಅಧಿಕಾರ ಇಲ್ಲದೇ ವಿಜಯೇಂದ್ರ ಭ್ರಷ್ಟಾಚಾರ ಮಾಡಿದ್ದಾರೆ. ವಿಜಯೇಂದ್ರರಿಂದ ನೈತಿಕತೆ ಕಲಿಬೇಕಾ? ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಿರುದ್ದವೂ ಕಿಡಿಕಾರಿದ ದಿನೇಶ್ ಗುಂಡೂರಾವ್, ಹೆಚ್ ಡಿಕೆ ಬರೀ ಕೆಟ್ಟ ಕೆಲಸಗಳನ್ನೇ ಮಾಡೋದು. ಕೆಟ್ಟ ಕೆಲಸ ಮಾಡಿ ಒಂದುವರೆ ವರ್ಷಕ್ಕಿಂತ ಜಾಸ್ತಿ ಸಿಎಂ ಆಗಲಿಲ್ಲ. ಬರೀ ಪಿತೂರಿ ಮಾಡೋದೆ ಹೆಚ್.ಡಿಕೆ ಕೆಲಸ ಎಂದು ಹರಿಹಾಯ್ದರು.

Key words: Yeddyurappa, corruption, Minister, Dinesh Gundurao