Tuesday, September 22, 2026

BDA Apartments

Home Front Page ಸಿಎಂ ಹೇಗೆ ಸೇಫ್  ಮಾಡಬೇಕೆಂದು ಸಚಿವರಿಗೆ ‘ಕೈ’ ಹೈಕಮಾಂಡ್ ಪಾಠ- ಬಿವೈ ವಿಜಯೇಂದ್ರ ಟೀಕೆ

ಸಿಎಂ ಹೇಗೆ ಸೇಫ್  ಮಾಡಬೇಕೆಂದು ಸಚಿವರಿಗೆ ‘ಕೈ’ ಹೈಕಮಾಂಡ್ ಪಾಠ- ಬಿವೈ ವಿಜಯೇಂದ್ರ ಟೀಕೆ

ಬೆಂಗಳೂರು,ಆಗಸ್ಟ್,5,2024 (www.justkannada.in): ಮುಡಾ ಹಗರಣದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯರನ್ನು ಸೇಫ್ ಮಾಡಲು ಹೇಗೆ ಡಿಫೆಂಡ್ ಮಾಡಬೇಕೆಂದು ಸಚಿವರಿಗೆ ಕಾಂಗ್ರೆಸ್ ಹೈಕಮಾಂಡ್ ಪಾಠ ಮಾಡಿ ಹೋಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟೀಕೆ ಮಾಡಿದ್ದಾರೆ.

ಈ ಕುರಿತು ಮಾತನಾಡಿದ ಬಿವೈ ವಿಜಯೇಂದ್ರ, ಸಿಎಂ ಸೇಫ್ ಮಾಡಲು ಹೇಗೆ ಡಿಫೆಂಡ್ ಮಾಡಬೇಕೆಂದು ಪಾಠ ಮಾಡಿ ಹೋಗಿದ್ದಾರೆ.   ಸರ್ಕಾರ ಹಗರಣದಲ್ಲೇ ಮುಚ್ಚಿ ಹೋಗಿದೆ.  ಸರ್ಕಾರವನ್ನ ಬಲವಂತವಾಗಿ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ದೆಹಲಿಯ ಗಾಂಧಿ ಕುಟುಂಬ ಸಂದೇಶ ನೀಡಿದೆ. ನಮ್ಮ ಹೋರಾಟದ ಬಿಸಿ ಕಾಂಗ್ರೆಸ್ ಸರ್ಕಾರಕ್ಕೆ ತಟ್ಟಿದೆ ಭ್ರಷ್ಟಾ ಕಾಂಗ್ರೆಸ್ ಸರ್ಕಾರಕ್ಕೆ ಬುದ್ದಿಕಲಿಸಬೇಕು ಎಂದು ಹರಿಹಾಯ್ದರು.

ಅಹಿಂದ ಹೆಸರು ಹೇಳಿಕೊಂಡು ಸಿದ್ಧರಾಮಯ್ಯ ಮೋಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರೇ ದೇವರು ನಿಮ್ಮನ್ನ ಮೆಚ್ಚುತ್ತಾನಾ?  ಹಗರಣದಲ್ಲಿ ನಾವು ಪರೋಕ್ಷವಾಗಿ ಭಾಗಿಯಾಗಿದ್ದೇವೆ ಎಂದು ಒಪ್ಪಿದ್ದಾರೆ. ಸ್ವಾಮಿ ಬಲಿಷ್ಠ ಮುಖ್ಯಮಂತ್ರಿಗೆ ಬೆದರಿಕೆ ಹಾಕಲು ನಾವು ಯಾರು? ಎಂದು ಬಿವೈ ವಿಜಯೇಂದ್ರ ಪ್ರಶ್ನಿಸಿದರು.

Key words: congress, high command, lesson, CM safe, BY Vijayendra