Friday, August 7, 2026

BDA Apartments

Home Front Page ಸಿಎಂ ಸಿದ್ದರಾಮಯ್ಯ ಕರ್ಮದ ಫಲ ಅನುಭವಿಸಬೇಕು- ಮಾಜಿ ಸಚಿವ ಜನಾರ್ದನ ರೆಡ್ಡಿ ವಾಗ್ದಾಳಿ

ಸಿಎಂ ಸಿದ್ದರಾಮಯ್ಯ ಕರ್ಮದ ಫಲ ಅನುಭವಿಸಬೇಕು- ಮಾಜಿ ಸಚಿವ ಜನಾರ್ದನ ರೆಡ್ಡಿ ವಾಗ್ದಾಳಿ

ಬೆಂಗಳೂರು,ಆಗಸ್ಟ್,3,2024 (www.justkannada.in):  ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಹಿನ್ನೆಲೆ ಈ ಕುರಿತು ಮಾಜಿ ಸಚಿವ ಜನಾರ್ದನ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಜನಾರ್ಧನ ರೆಡ್ಡಿ, ಸಿದ್ದರಾಮಯ್ಯ ಕರ್ಮದ ಫಲ  ಅನುಭವಿಸಬೇಕು. ನನ್ನ ವಿರುದ್ದ ಅಧಿಕಾರಕ್ಕಾಗಿ ಪಾದಯಾತ್ರೆ ಮಾಡಿದ್ದರು. ನನ್ನನ್ನ 4 ವರ್ಷಗಳ ಕಾಲ ನನ್ನ ಜೈಲಿಗೆ ಹಾಕಿದ್ರು . ಅವರ ಕುಟುಂಬ ಈಗ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡಿದೆ ದೇವರು ಎಲ್ಲವನ್ನೂ ನೋಡುತಿರುತ್ತಾನೆ ಎಂದರು

ಈಗ ಸಿದ್ಧರಾಮಯ್ಯ ತಪ್ಪು ಮಾಡಿದ್ದರೆ. ಸಿಬಿಐ ತನಿಖೆ ಎದುರಿಸಲಿ ತಪ್ಪು ಮಾಡದೇ ಇದ್ದಿದ್ದರೇ ಸಿಎಂಗೆ ಭಯ ಏಕೆ..? ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಜನಾರ್ದನ ರೆಡ್ಡಿ ಆಗ್ರಹಿಸಿದರು.

Key words: CM Siddaramaiah, muda scam, Janardhan Reddy