Friday, August 7, 2026

BDA Apartments

Home Front Page ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟಾಚಾರ- ಆರ್.ಅಶೋಕ್

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟಾಚಾರ- ಆರ್.ಅಶೋಕ್

ಬೆಂಗಳೂರು,ಜುಲೈ,29,2024 (www.justkannada.in): ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಭ್ರಷ್ಟಾಚಾರ ನಡೆಯುತ್ತಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ  ಭ್ರಷ್ಟಾಚಾರ ತಾಂಡವಾಡುತ್ತಿದೆ.   ಎಲ್ಲಾ ಇಲಾಖೆಗಳಲ್ಲಿ ಬರಿ ಭ್ರಷ್ಟಾಚಾರವೇ ತುಂಬಿದೆ.  ಸದನದಲ್ಲಿ ಚರ್ಚೆ ಮಾಡಲು ಆಗದೆ ಕಾಂಗ್ರೆಸ್ ನವರು ಓಡಿ ಹೋದರು. ಈಗ ಪ್ರೇಸ್ ಮೀಟ್ ಮಾಡ್ತಾರೆ ಜಾಹೀರಾತು ಕೊಡ್ತಾರೆ ಎಂದು ಕಿಡಿಕಾರಿದರು.

ಸಿಎಂ ಸಿದ್ದರಾಮಯ್ಯ ಕಾನೂನು ಬದ್ಧವಾಗಿ ಸೈಟ್ ಪಡೆದಿರುವುದಾಗಿ ಹೇಳುತ್ತಾರೆ. ಅಲ್ಲದೆ  62 ಕೋಟಿ ಕೊಡಬೇಕು ಅಂತಾರೆ.  ನೀವು ಹೇಳುವ ಜನಪರ ಸಿಎಂ ಸಿದ್ದರಾಮಯ್ಯ ಇವರೇನಾ ಎಂದು ವಾಗ್ದಾಳಿ ನಡೆಸಿದರು.

Key words: Congress, power, Corruption, R. Ashok