Friday, August 7, 2026

BDA Apartments

Home Front Page ನಂಜನಗೂಡು ಪ್ರವಾಸಿ ಮಂದಿರಕ್ಕೆ ಬೀಗ: ಕೇಂದ್ರ ಸಚಿವ ಹೆಚ್‌ ಡಿಕೆ ಹೋದ್ರೂ ಬೀಗ ತೆಗೆಯದ ಅಧಿಕಾರಿಗಳು

ನಂಜನಗೂಡು ಪ್ರವಾಸಿ ಮಂದಿರಕ್ಕೆ ಬೀಗ: ಕೇಂದ್ರ ಸಚಿವ ಹೆಚ್‌ ಡಿಕೆ ಹೋದ್ರೂ ಬೀಗ ತೆಗೆಯದ ಅಧಿಕಾರಿಗಳು

ಮೈಸೂರು,ಜುಲೈ,28,2024 (www.justkannada.in): ಇಂದು ನಂಜನಗೂಡು ಪ್ರವಾಸ ಕೈಗೊಂಡಿದ್ದ ಹೆಚ್.ಡಿ ಕುಮಾರಸ್ವಾಮಿ ಪ್ರವಾಸಿ ಮಂದಿರಕ್ಕೆ ವಿಶ್ರಾಂತಿಗೆಂದು ತೆರಳಿದ್ದು ಈ ವೇಳೆ ಅಧೀಕಾರಿಗಳು ಪ್ರವಾಸಿ ಮಂದಿರದ ಬೀಗ ತೆಗೆಯದೇ ನಿರ್ಲಕ್ಷ್ಯ ವಹಿಸಿರುವ ಘಟನೆ ನಡೆದಿದೆ.

ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಇಂದು ನಂಜನಗೂಡು ಪ್ರವಾಸ ಕೈಗೊಂಡಿದರು.  ಈ ಮಧ್ಯೆ ಪ್ರವಾಸಿ ಮಂದಿರಕ್ಕೆ ವಿಶ್ರಾಂತಿಗೆಂದು ತೆರಳಿದ್ದ ವೇಳೆ. ಕೇಂದ್ರ ಸಚಿವರ ಭೇಟಿ ವಿಚಾರವನ್ನ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ಈ ಬಗ್ಗೆ ಪ್ರವಾಸ ಪಟ್ಟಿಯನ್ನು ಸಚಿವಾಲಯದ ಅಧಿಕಾರಿಗಳು ಬಿಡುಗಡೆ ಮಾಡಿದ್ದರು.

ಈ ನಡುವೆ ವಿಶ್ರಾಂತಿಗಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಪ್ರವಾಸಿ ಮಂದಿರಕ್ಕೆ ತೆರಳಿದ್ದರು. ಆದರೆ ಪ್ರವಾಸಿ ಮಂದಿರದ ಬಾಗಿಲಿಗೆ ಬೀಗ ಹಾಕಲಾಗಿತ್ತು.10 ನಿಮಿಷ ಕಾದರೂ ಸಹ ಬಾಗಿಲು ತೆಗೆಯಲು ಸಿಬ್ಬಂದಿಗಳು ಬರಲಿಲ್ಲ. ಕೇಂದ್ರ ಸಚಿವ ಹೆಚ್‌ ಡಿಕೆ ಹೋದರೂ ಕೂಡ  ಅಧಿಕಾರಿಗಳು ಪ್ರವಾಸಿ ಮಂದಿರದ ಬೀಗ ತೆಗೆದಿಲ್ಲ.

ಈ ವೇಳೆ ಹೆಚ್.ಡಿ ಕುಮಾರಸ್ವಾಮಿ ವಾಪಸ್ಸು ತೆರಳಿ ಕಾರಿನಲ್ಲೇ ಕುಳಿತಿದ್ದರು. ಇನ್ನು  ಘಟನೆ  ಬಗ್ಗೆ ಅಸಮಾಧಾನ ಮಾಜಿ ಸಚಿವ ಸಾ.ರಾ.ಮಹೇಶ್ ವ್ಯಕ್ತಪಡಿಸಿದ್ದಾರೆ.

Key words: Nanjangudu, Tourist Temple, Lock, Union Minister, HDK