Friday, November 6, 2026

Dasara Wishes

Just Kannada DasraWishes_JK DasraWishes JK
Happy Dasara
Home Crime NEET-UG ಪೇಪರ್ ಸೋರಿಕೆ ಪ್ರಕರಣ: ಅರ್ಧ ಸುಟ್ಟ ಪ್ರಶ್ನೆ ಪತ್ರಿಕೆ ಸಿಬಿಐ ತನಿಖೆಗೆ ನೆರವಾಯ್ತು.!

NEET-UG ಪೇಪರ್ ಸೋರಿಕೆ ಪ್ರಕರಣ: ಅರ್ಧ ಸುಟ್ಟ ಪ್ರಶ್ನೆ ಪತ್ರಿಕೆ ಸಿಬಿಐ ತನಿಖೆಗೆ ನೆರವಾಯ್ತು.!

half-burnt scrap of a printout from a leaked NEET-UG 2024 question paper--with its unique bar code still intact--that was recovered from a hostel in Patna, helped to unravel the conspiracy and modus operandi of a gang involved in National Eligibility cum Entrance Test  (NEET) paper leak, Central Bureau of Investigation (CBI) said.

 

ನವ ದೆಹಲಿ, ಜು,26,2024: (www.justkannada.in news) ಸೋರಿಕೆಯಾದ NEET-UG 2024 ಪ್ರಶ್ನೆ ಪತ್ರಿಕೆಯ ಪ್ರಿಂಟ್‌ಔಟ್‌ನ ಅರ್ಧ ಸುಟ್ಟ ಸ್ಕ್ರ್ಯಾಪ್  ನಲ್ಲಿದ್ದ ಬಾರ್ ಕೋಡ್‌ , ಹಗರಣದ ಆರೋಪಿಗಳನ್ನು ಪತ್ತೆ ಹಚ್ಚಲು ಸಿಬಿಐಗೆ ನೆರವು ನೀಡಿತು ಎಂಬ ಕುತೂಹಲಕಾರಿ ಅಂಶ ಬಹಿರಂಗಗೊಂಡಿದೆ.

ಪ್ರಶ್ನೆ ಪತ್ರಿಕೆಯ ಪ್ರಿಂಟ್‌ಔಟ್‌ನ ಅರ್ಧ ಸುಟ್ಟ  ಭಾಗವನ್ನು ಪಾಟ್ನಾದ ಹಾಸ್ಟೆಲ್‌ನಿಂದ ವಶಪಡಿಸಿಕೊಳ್ಳಲಾಗಿತ್ತು. ಇದು ಹಗರಣದಲ್ಲಿ ಭಾಗಿಯಾಗಿರುವ ಗ್ಯಾಂಗ್‌ನ ಪಿತೂರಿ ಮತ್ತು ಕಾರ್ಯಚಟುವಟಿಕೆ  ಬಿಚ್ಚಿಡಲು ಸಹಾಯ ಮಾಡಿತು.  ಅರ್ಹತೆ ಕಮ್ ಪ್ರವೇಶ ಪರೀಕ್ಷೆ (NEET) ಪೇಪರ್ ಸೋರಿಕೆಯಾಗಿದೆ ಎಂದು ಕೇಂದ್ರೀಯ ತನಿಖಾ ದಳ (ಸಿಬಿಐ) ಹೇಳಿದೆ.

ನೀಟ್ ಪೇಪರ್ ಸೋರಿಕೆ ಪ್ರಕರಣದ ತನಿಖೆಯ ಕುರಿತು ಹೇಳಿಕೆ ನೀಡಿರುವ ಸಿಬಿಐ, ನೀಟ್ ಪೇಪರ್ ಸೋರಿಕೆ ಪ್ರಕರಣದ ‘ಮಾಸ್ಟರ್ ಮೈಂಡ್’ ಪಂಕಜ್ ಕುಮಾರ್, ಹಜಾರಿಬಾಗ್‌ನ ಓಯಸಿಸ್ ಶಾಲೆಯ ಪ್ರಾಂಶುಪಾಲ ಮತ್ತು ಉಪ ಪ್ರಾಂಶುಪಾಲರ ಜತೆಗೆ ಶಾಮೀಲಾಗಿ ಗಂಟೆಗಳ ಮೊದಲು ಪ್ರಶ್ನೆ ಪತ್ರಿಕೆ ಪಡೆದುಕೊಂಡಿದ್ದ.

ಮೇ 5 ರಂದು ಪರೀಕ್ಷೆಯ ಪ್ರಾರಂಭಕ್ಕೂ ಮುನ್ನ ಪ್ರಶ್ನೆಗಳಿಗೆ ಉತ್ತರ ಬರೆದು ಅದನ್ನು ಸಂಬಂಧಿಸಿದ ಅಭ್ಯರ್ಥಿಗಳಿಗೆ ಕಳುಹಿಸಲಾಗಿದೆ.

ತನಿಖಾ ಸಂಸ್ಥೆಯ ಪ್ರಕಾರ, ಆಪಾದಿತ ಮಾಸ್ಟರ್‌ಮೈಂಡ್‌ಗಳಲ್ಲಿ ಒಬ್ಬ ಕುಮಾರ್, ಓಯಸಿಸ್ ಶಾಲೆಯ ಪ್ರಾಂಶುಪಾಲ ಎಹ್ಸಾನುಲ್ ಹಕ್, ಎನ್‌ಟಿಎ ಸಿಟಿ ಕೋಆರ್ಡಿನೇಟರ್ ಮತ್ತು ಕೇಂದ್ರದ ಅಧೀಕ್ಷಕರಾಗಿದ್ದ ವೈಸ್ ಪ್ರಿನ್ಸಿಪಾಲ್ ಇಮ್ತಿಯಾಜ್ ಆಲಂ ಅವರ ಸಹಕಾರದೊಂದಿಗೆ ಈ ಕೃತ್ಯ ಎಸಗಿದ್ದ. ಇದೀಗ ಈ ಮೂವರನ್ನೂ ಸಿಬಿಐ ಬಂಧಿಸಿದೆ.

ಹೇಳಿಕೆಯ ಪ್ರಕಾರ, NEET UG 2024 ಪ್ರಶ್ನೆ ಪತ್ರಿಕೆಗಳನ್ನು ಹೊಂದಿರುವ ಟ್ರಂಕ್‌ಗಳನ್ನು ಶಾಲೆಗೆ ತರಲಾಯಿತು. ಮೇ 5, 2024 ರ ಬೆಳಿಗ್ಗೆ ನಿಯಂತ್ರಣ ಕೊಠಡಿಯಲ್ಲಿ ಇರಿಸಲಾಯಿತು. ಟ್ರಂಕ್‌ಗಳು ಬಂದ ನಿಮಿಷಗಳ ನಂತರ, ಪ್ರಾಂಶುಪಾಲರು ಮತ್ತು ಉಪ ಪ್ರಾಂಶುಪಾಲರು (ಹಜಾರಿಬಾಗ್ ಶಾಲೆಯ ) ಟ್ರಂಕ್‌ಗಳನ್ನು ಇರಿಸಲಾಗಿದ್ದ ಕೋಣೆಗೆ ಅನಧಿಕೃತವಾಗಿ ಮತ್ತು ಕಾನೂನುಬಾಹಿರವಾಗಿ ಪ್ರವೇಶಿಸಲು, ಮಾಸ್ಟರ್‌ಮೈಂಡ್ (ಕುಮಾರ್) ಗೆ ಸಹಕರಿಸಿದರು. ಇದೀಗ ಟ್ರಂಕ್ ತೆರೆಯಲು ಮತ್ತು ಟ್ರಂಕ್‌ನಿಂದ ಪ್ರಶ್ನೆ ಪತ್ರಿಕೆಗಳನ್ನು ನಕಲು ಮಾಡಲು ಬಳಸಿದ ಅತ್ಯಾಧುನಿಕ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ, ”ಎಂದು ಸಿಬಿಐ ವಕ್ತಾರರನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

NEET-UG ಪೇಪರ್ ಸೋರಿಕೆ ಪ್ರಕರಣ: ಅರ್ಧ ಸುಟ್ಟ ಪ್ರಶ್ನೆ ಪತ್ರಿಕೆ ಸಿಬಿಐ ತನಿಖೆಗೆ ನ...

ತನಿಖಾ ಸಂಸ್ಥೆಯ ಪ್ರಕಾರ, ಎಐಐಎಂಎಸ್ ಪಾಟ್ನಾ, ರಿಮ್ಸ್ ರಾಂಚಿ ಮತ್ತು ಭರತ್‌ಪುರದ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಕೋರ್ಸ್‌ಗಳನ್ನು ಓದುತ್ತಿರುವ ಬ್ರಿಲಿಯಂಟ್‌ ಗಳಿಂದ ಪ್ರಶ್ನೆ ಪತ್ರಿಕೆಗೆ ಉತ್ತರ ಪಡೆಯಲಾಗಿದೆ. ಈ ಸಂಬಂಧ ಸಿಬಿಐ ಏಳು ಮಂದಿಯನ್ನು ಬಂಧಿಸಿದೆ. ಆರೋಪಿಗಳಿಗೆ ಹಣ ಪಾವತಿಸಿದ ಕೆಲವು ಆಯ್ದ ವಿದ್ಯಾರ್ಥಿಗಳೊಂದಿಗೆ ಪರಿಹರಿಸಿದ ಕಾಗದವನ್ನು ಹಂಚಲಾಗಿದೆ.

ಪ್ರಶ್ನೆ ಪತ್ರಿಕೆ ಸಾಲ್ವ ಮಾಡಲು ನೆರವು ನೀಡಿದ ಪ್ರತಿಷ್ಠಿತ ಕಾಲೇಜುಗಳ ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಗುರುತಿಸಲಾಗಿದೆ ಮತ್ತು ಅವರಲ್ಲಿ ಹೆಚ್ಚಿನವರನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಇದುವರೆಗೆ 36 ಜನರನ್ನು ಬಂಧಿಸಿದೆ.

key words: half-burnt scrap of a printout, leaked NEET-UG 2024, question paper, unique bar code

SUMMARY:

NEET

half-burnt scrap of a printout from a leaked NEET-UG 2024 question paper–with its unique bar code still intact–that was recovered from a hostel in Patna, helped to unravel the conspiracy and modus operandi of a gang involved in National Eligibility cum Entrance Test  (NEET) paper leak, Central Bureau of Investigation (CBI) said.