Tuesday, September 22, 2026

BDA Apartments

ಮನೆಯೂಟ, ಹಾಸಿಗೆ ಕೋರಿ ನಟ ದರ್ಶನ್ ಅರ್ಜಿ: ತೀರ್ಪು ಕಾಯ್ದಿರಿಸಿದ ಕೋರ್ಟ್ BDA JK_Adv...
Home Cinema ಮನೆಯೂಟ, ಹಾಸಿಗೆ ಕೋರಿ ನಟ ದರ್ಶನ್ ಅರ್ಜಿ: ತೀರ್ಪು ಕಾಯ್ದಿರಿಸಿದ ಕೋರ್ಟ್

ಮನೆಯೂಟ, ಹಾಸಿಗೆ ಕೋರಿ ನಟ ದರ್ಶನ್ ಅರ್ಜಿ: ತೀರ್ಪು ಕಾಯ್ದಿರಿಸಿದ ಕೋರ್ಟ್

ಬೆಂಗಳೂರು,ಜುಲೈ, 22,2024 (www.justkannada.in):   ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಮನೆಯೂಟ, ಹಾಸಿಗೆ, ಪುಸ್ತಕ ಕೋರಿ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನ ಜುಲೈ 25ಕ್ಕೆ ಬೆಂಗಳೂರಿನ ಆರ್ಥಿಕ ಅಪರಾಧಗಳ ನ್ಯಾಯಾಲಯ ಕಾಯ್ದಿರಿಸಿದೆ.

ನಟ ದರ್ಶನ್ ನ್ಯಾಯಾಂಗ ಬಂಧನದಲ್ಲಿರುವ ಹಿನ್ನೆಲೆಯಲ್ಲಿ, ಜೈಲು ಊಟ ಆಗುತ್ತಿಲ್ಲ. ಹಾಗಾಗಿ ಮನೆ ಊಟ, ಹಾಸಿಗೆ, ದಿಂಬು, ಪುಸ್ತಕ ನೀಡುವಂತೆ ಕೋರಿ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ಹೈಕೋರ್ಟ್ ಈ ಸಂಬಂಧ ಮ್ಯಾಜಿಸ್ಟ್ರೇಟ್ ಗೆ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿತ್ತು. ಹೀಗಾಗಿ ನಟ ದರ್ಶನ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.ಮನೆಯೂಟ darshan darshan 1

ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ಆರ್ಥಿಕ ಅಪರಾಧಗಳ ನ್ಯಾಯಾಲಯ ನ್ಯಾಯಾದೀಶ ವಿಶ್ವನಾಥ್ ಸಿ ಗೌಡರ್, ಅರ್ಜಿ ಕುರಿತ ತೀರ್ಪನ್ನು ಜುಲೈ 25ರಂದು ಪ್ರಕಟಿಸುವುದಾಗಿ ಹೇಳಿ ತೀರ್ಪು ಕಾಯ್ದಿರಿಸಿದೆ. ಈ ಹಿನ್ನೆಲೆಯಲ್ಲಿ ನಟ ದರ್ಶನ್ ಗೆ  ಮೂರು ದಿನಗಳ ಕಾಲ ಜೈಲೂಟವೇ ಗತಿಯಾಗಿದೆ.

Key words: Actor, Darshan,  application, Court, reserved, judgment