Friday, July 31, 2026

BDA Apartments

Home Front Page ನಿಗಮದ ಹಣವೇನು ನಿಮ್ಮ ಪಕ್ಷದ ಪಾರ್ಟಿ ಫಂಡ್ ಅಂದುಕೊಂಡಿದ್ದೀರಾ? ಆರ್.ಅಶೋಕ್ ವಾಗ್ದಾಳಿ

ನಿಗಮದ ಹಣವೇನು ನಿಮ್ಮ ಪಕ್ಷದ ಪಾರ್ಟಿ ಫಂಡ್ ಅಂದುಕೊಂಡಿದ್ದೀರಾ? ಆರ್.ಅಶೋಕ್ ವಾಗ್ದಾಳಿ

ಬೆಂಗಳೂರು,ಜುಲೈ,19,2024 (www.justkannada.in): ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಕಾಂಗ್ರೆಸ್ ಪಕ್ಷದ ಬೋಗಸ್ ಗ್ಯಾರೆಂಟಿ ಕಾರ್ಡ್ ಪ್ರಿಂಟ್ ಮಾಡಲು ಬಳಕೆಯಾಗಿದೆ  ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೇ ನಿಗಮದ ಹಣವೇನು ನಿಮ್ಮ ಪಕ್ಷದ ಪಾರ್ಟಿ ಫಂಡ್ ಅಂದುಕೊಂಡಿದ್ದೀರಾ? ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಕಿಡಿಕಾರಿರುವ ಆರ್.ಅಶೋಕ್,  ಸಿದ್ದರಾಮಯ್ಯ ತಾವು ಸಾಮಾಜಿಕ ನ್ಯಾಯ ನಮ್ಮ ಕಮಿಟ್ಮೇಂಟ್​ ಅಂತ ಬೊಗಳೆ ಭಾಷಣ ಬಿಡುತ್ತೀರಿ, ದಲಿತರ ಹಣ ಹೆಂಡ, ಸಾರಾಯಿ ಖರೀದಿಸಲು, ಸಚಿವರ ಫ್ಲೈಟ್ ಟಿಕೆಟ್ ಬುಕ್ ಮಾಡಲು ಬಳಸಲಾಗಿದೆ.

ಕಾಂಗ್ರೆಸ್ ಪಕ್ಷದ ಬೋಗಸ್ ಗ್ಯಾರೆಂಟಿ ಕಾರ್ಡ್ ಪ್ರಿಂಟ್ ಮಾಡಲು ಬಳಕೆಯಾಗುತ್ತಿದ್ದಾಗ ಎಲ್ಲಿ ಹೋಗಿತ್ತು ನಿಮ್ಮ ಸೋ ಕಾಲ್ಡ್​ ಕಮಿಟ್ಮೇಂಟ್​ ಎಂದು ಆರ್ ಅಶೋಕ್ ಗುಡುಗಿದರು.

Key words: party fund, money, Valmiki corporation, R. Ashok